HEALTH TIPS

ಸಾಂಸ್ಕøತಿಕ ವೈವಿಧ್ಯಗಳನ್ನು ಪೂಜನೀಯ ಭಾವದಿಂದ ಬೆಂಬಲಿಸಬೇಕು: ಕಲಾರತ್ನ ಶಂ.ನಾ.ಅಡಿಗ ಕುಂಬಳೆ: ದೇಲಂಪಾಡಿ ಬ್ರಹ್ಮಕಲಶೋತ್ಸವ ಸಾಂಸ್ಕøತಿಕ ವೇದಿಕೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅಭಿಮತ

ಕುಂಬಳೆ: ಸಂಸ್ಕøತಿ, ಸಂಸ್ಕಾರ ಪೂರಕವಾದ ಎಲ್ಲಾ ಕಾರ್ಯಕ್ರಮಗಳೂ ಸಾಂಸ್ಕøತಿಕವಾದುದು. ಸಂಗೀತ, ಸಾಹಿತ್ಯಗಳಲ್ಲಿ ಆಸಕ್ತಿ ಇಲ್ಲದವ ಕೋಡು ಮತ್ತು ಬಾಲಗಳಿಲ್ಲದ ಪ್ರಾಣಿಗಳಂತೆ ಎಂದು ಶುಭಾಷಿತಗಳಲ್ಲಿ ಉಲ್ಲೇಖಿಸಿರುವುದರ ಹಿಂದಿನ ತತ್ವಗಳನ್ನು ನಾವು ಗ್ರಹಿಸಬೇಕು. ಅದು ನಮ್ಮ ನಡವಳಿಕೆಗಳ ಸಂಕೇತ. ಸಾಂಸ್ಕøತಿಕ ವೈವಿಧ್ಯಗಳನ್ನು ಪೂಜನೀಯ ಭಾವನೆಯಿಂದ ಬೆಂಬಲಿಸಬೇಕು ಎಂದು ಕಲಾರತ್. ವಕೀಲ.ಶಂ.ನಾ.ಅಡಿಗ ಕುಂಬಳೆ ಅಭಿಪ್ರಾಯ ವ್ಯಕ್ತಪಡಿಸಿದರು.

ಅಂಗಡಿಮೊಗರು ಸಮೀಪದ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ಮಂಗಳವಾರದಿಂದ ಆರಂಭಗೊಂಡ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮೊದಲ ದಿನ ಸಂಜೆ ನಡೆದ ಸಾಂಸ್ಕøತಿಕ ಕಾರ್ಯಕ್ರಮವನ್ನು ನಟರಾಜ ವೇದಿಕೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  


ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಖ್ಯಾತ ಯಕ್ಷಗಾನ ಕಲಾವಿದ ಜಯಪ್ರಕಾಶ ಶೆಟ್ಟಿ ಪೆರ್ಮುದೆ ಅವರು ಮಾತನಾಡಿ, ವೇದ ನಮ್ಮ ಜೀವನದ ಸಾರ ಸರ್ವ. ವೈದಿಕ, ಧಾರ್ಮಿಕ, ಸಾಂಸ್ಕøತಿ ವಿಭಾಗಗಳು ಈಶ್ವರನ ಮೂರು ಕಣ್ಣುಗಳಂತೆ. ಅದು ಒಂದನ್ನೊಂದು ಬೆಸೆದುಕೊಂಡಿದೆ. ಇವೆಲ್ಲವೂ ಶ್ರದ್ಧಾಮೂಲಗಳಾಗಿ ವಿಷಯದ ಅಂಗೋಂಪಾಂಗಗಳಾಗಿವೆ. ಕಥಾ ರೂಪದಲ್ಲಿ ಹೇಳಲಾಗುವ ಸಂದೇಶಗಳು ಸಾಂಸ್ಕøತಿಕ ಪ್ರದರ್ಶನಗಳ ಮೂಲಕ ಜನರ ಮನಸ್ಸನ್ನು ಬೇಗನೆ ಮುಟ್ಟಿ ಮನಸ್ಸನ್ನು ತಟ್ಟಿ ಬದುಕಿನ ವಿಶಾಲತೆಗೆ ಕಾರಣವಾಗುತ್ತದೆ. ಯಶಸಸ್ವಿಯಾಗಿ ಕಾರ್ಯಕ್ರಮಗಳು ಮೂಡಿಬರಲಿ ಎಂದು ಶುಭಹಾರೈಸಿದರು.  

ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಪಿ.ಬದಿಯಡ್ಕ ಸಮಾರಂಭವನ್ನು ಉದ್ಘಾಟಿಸಿ ಶುಭಹಾರೈಸಿದರು.  

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗಿರಿಧರ ಶೆಟ್ಟಿ ಮಂಗಳೂರು, ಶ್ರೀಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ನ್ಯಾಯವಾದಿ ಬಿ.ಸುಬ್ಬಯ್ಯ ರೈ ಇಚ್ಲಂಪಾಡಿ, ಸ್ವಾಗತ ಸಮಿತಿಯ ಪಟ್ಲ ದಾಮೋದರ ಶೆಟ್ಟಿ ಪಂಜಳ, ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಶಂಕರ ರೈ ಮಾಸ್ತರ್, ಅಶೋಕ ಮಾಸ್ತರ್ ಬಾಡೂರು, ಅಮರಾಥ ರೈ ಚಿಗುರುಮೊಗೇರು, ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ, ಬ್ರಹ್ಮಕಲಶೋತ್ಸವ ಆರ್ಥಿಕ ಸಮಿತಿ ಸಂಚಾಲಕ ಡಿ.ಸುಬ್ಬಣ್ಣ ಆಳ್ವ, ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ರಾಜೇಂದ್ರ ರೈ ದೇಲಂಪಾಡಿ, ಕಾರ್ಯಾಧ್ಯಕ್ಷ ಡಿ.ದಾಮೋದರ ದೇಲಂಪಾಡಿ ಉಪಸ್ಥಿತರಿದ್ದರು. ವಿಠ್ಠಲ ರೈ ಸ್ವಾಗತಿಸಿ, ರಾಜೇಂದ್ರ ರೈ ವಂದಿಸಿದರು. ಶಿವಪ್ರಸಾದ್ ಕುಡಾಲ್ ಕಾರ್ಯಕ್ರಮ ನಿರೂಪಿಸಿದರು.


ಬಳಿಕ ನಾಟ್ಯ ಶಿವ ನೃತ್ಯಶಾಲೆ ಕಾಸರಗೋಡು ಮತ್ತು ದೇಲಂಪಾಡಿ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿದುರ್ಷಿ ಸುಜಾತಾ ಸುಧೀಶ್ ನಿರ್ದೇಶನದಲ್ಲಿ ನೃತ್ಯ ವೈವಿಧ್ಯ, ತುಳುನಾಡ ತುಡರ್ ಕ್ರಿಯೆಶನ್ಸ್ ದೇಲಂಪಾಡಿ ತಂಡದಿಂದ ಭಕ್ತಿ ರಸಮಂಜರಿ, ಪುತ್ತಿಗೆಯ ಕುಮಾರಸ್ವಾಮಿ ನಾಟ್ಯ ನಿಲಯದ ಧನ್ಯಶ್ರೀ ಬಾಡೂರು ಅವರ ಶಿಷ್ಯವೃಂದದವರಿಂದ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು. 

ಬುಧವಾರ ಮುಂಜಾನೆ ಗಣಪತಿ ಹೋಮಾದಿ ವೈದಿಕ ವಿಧಿಗಳು, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಸಂಜೆ ಎಡನೀರು ಶ್ರೀಗಳ ಆಗಮನ, ಧಾರ್ಮಿಕ ಸಭೆ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. 

ಇಂದು(ಗುರುವಾರ)ಶ್ರೀಕ್ಷೇತ್ರದ ಕಾರ್ಯಕ್ರಮಗಳು:

 ಬೆಳಿಗ್ಗೆ 6 ರಿಂದ ಗಣಪತಿಹೋಮ, ಶಾಂತಿಹೋಮ, ಸ್ವಶಾಂತಿಹೋಮ, ಅದ್ಭುತಶಾಂತಿ ಹೋಮ, ಚೋರಶಾಂತಿ ಹೋಮ, ದಹನ ಪ್ರಾಯಶ್ಚಿತ್ತ, ತ್ರಿಕಾಲಪೂಜೆ, ಅಂಕುರಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ಸಂಜೆ 6ರಿಂದ ಹೋಮಕಲಶಾಭಿಷೇಕ, ಅನುಜ್ಞಾಕಲಶಪೂಜೆ, ತ್ರಿಕಾಲಪೂಜೆ, ಮಹಾಪೂಜೆ ನಡೆಯಲಿದೆ. ಸಂಜೆ 5 ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀಧಾಮದ ಸ್ವಾಮೀಜಿ ಆಶೀರ್ವಚನ ನೀಡುವರು, ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಕುಕ್ಕಾಜೆ ಧಾರ್ಮಿಕ ಉಪನ್ಯಾಸ ನೀಡುವರು. ಡಿ.ದಾಮೋದರ ಅಧ್ಯಕ್ಷತೆ ವಹಿಸುವರು. ವಿವಿಧ ವಲಯದ ಗಣ್ಯರು ಉಪಸ್ಥಿತರಿರುವರು. ಬೆಳಿಗ್ಗೆ 10 ರಿಂದ ಸಾಹಿತ್ಯ ಗಾನ ನೃತ್ಯ ವೈಭವ, ಮಧ್ಯಾಹ್ನ 2 ರಿಂದ ಭರತನಾಟ್ಯ ಪ್ರದರ್ಶನ, ರಾತ್ರಿ 7 ರಿಂದ ಪಾವಂಜೆ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries