ಕುಂಬಳೆ: ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕøತಿಗಳ ಸಂವರ್ಧನೆ ಮತ್ತು ಸಂರಕ್ಷಣೆಗಾಗಿ 1915 ರಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು-ನುಡಿಗೆ ಸಲ್ಲಿಸಿದ ಸೇವೆ ಅಪಾರವಾದುದು. ಕನ್ನಡ ಸಾಹಿತ್ಯದ ಸವಿಯನ್ನು ಕನ್ನಡನಾಡಿನ ಮೂಲೆ ಮೂಲೆಗೆ, ಹೊರನಾಡಿಗೆ, ಗಡಿನಾಡಿಗೆ ತಲುಪಿಸುವ ಮತ್ತು ವಿಸ್ತರಿಸುವ ಕಾಯಕವನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ತುತ್ಯರ್ಹವಾಗಿ ಮಾಡುತ್ತಿದೆ ಎಂದು ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಪ್ರಾಧ್ಯಾಪಕ ಹರೀಶ.ಜಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಧರ್ಮತ್ತಡ್ಕ ಯುವಕ ಸಂಘ ಗ್ರಂಥಾಲಯ ಮತ್ತು ವಾಚನಾಲಯದ ಸಹಕಾರದೊಂದಿಗೆ ಧರ್ಮತ್ತಡ್ಕದ ಯುವಕ ಸಂಘ ಗ್ರಂಥಾಲಯದಲ್ಲಿ ಮಂಗಳವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 111 ಸಂಸ್ಥಾಪನಾ ದಿನಾಚರಣೆಯಲ್ಲಿ 'ಕನ್ನಡ ಸಾಹಿತ್ಯ ಪರಿಷತ್ತಿನ ಉಗಮ ಮತ್ತು ವಿಕಾಸ' ಎನ್ನುವ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಅಧ್ಯಕ್ಷತೆ ವಹಿಸಿದ್ದರು.
ಧರ್ಮತ್ತಡ್ಕ ಯುವಕ ಸಂಘ ಗ್ರಂಥಾಲಯ ಮತ್ತು ವಾಚನಾಲಯದ ಅಧ್ಯಕ್ಷ ಸಿ. ಎಚ್. ರಾಮಮೋಹನ ಚೆಕ್ಕೆ, ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲಾ ಪ್ರಬಂಧಕ ಎನ್. ಶಂಕರನಾರಾಯಣ ಭಟ್, ಪ್ರಾಂಶುಪಾಲ ರಾಮಚಂದ್ರ ಭಟ್. ಎನ್. ಶುಭ ಹಾರೈಸಿದರು.
ಧರ್ಮತ್ತಡ್ಕ ಪ್ರೌಢಶಾಲಾ ಮುಖ್ಯ ಶಿಕ್ಷಕ ಶಶಿಕುಮಾರ್.ಪಿ, ಎ.ಯು.ಪಿ ಶಾಲೆಯ ಮುಖ್ಯಶಿಕ್ಷಕ ನೇರೋಳು ಮಹಾಲಿಂಗ ಭಟ್, ರವಿಲೋಚನ ಸಿ.ಎಚ್, ರಾಧಾಮಾಧವ ಆಟಿಕುಕ್ಕೆ, ಈಶ್ವರಿ.ಡಿ ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನರಾದ ಮೀಯಪದವು ಹೈಯರ್ ಸೆಕೆಂಡರಿ ಶಾಲಾ ಪ್ರಬಂಧಕಿ ಪ್ರೇಮಾ .ಕೆ ಭಟ್ ತೊಟ್ಟೆತ್ತೋಡಿ ಅವರಿಗೆ ಮತ್ತು ಪೆಹಲ್ಗಾಮಿನಲ್ಲಿ ಮಡಿದವರಿಗೆ ಸಭೆಯು ಶ್ರದ್ಧಾಂಜಲಿ ಸಲ್ಲಿಸಿತು.
ದಿವ್ಯ. ಎಂ.ವಿ, ಸ್ವಾತಿ. ಎನ್, ಆಶಾಲತ, ಚಿತ್ರಲತಾ.ಡಿ ಪ್ರಾರ್ಥನೆ ಹಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಪಿ.ರಾಮಚಂದ್ರ ಭಟ್. ಧರ್ಮತ್ತಡ್ಕ ವಂದಿಸಿದರು.




.jpg)
.jpg)
.jpg)
