ಮಂಜೇಶ್ವರ: ಇತ್ತೀಚೆಗೆ ನಿಧನರಾದ ಶ್ರೀ ಮಹಾಲಿಂಗೇಶ್ವರ ಸೇವಾಟ್ರಸ್ಟ್ ನ ಅಧ್ಯಕ್ಷೆ, ನಾಡಿನ ಧೀಮಂತ ಮಹಿಳೆ ಪ್ರೇಮಾ ಕೆ ಭಟ್ ತೊಟ್ಟೆತ್ತೋಡಿಯವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿತು. ಶ್ರೀ ಮಹಾಲಿಂಗೇಶ್ವರ ಸೇವಾಟ್ರಸ್ಟ್ ಆಯೋಜಿಸಿದ್ದ ಸಮಾರಂಭದಲ್ಲಿ ಹತ್ತಾರು ಕ್ಷೇತ್ರ, ಭಜನಾ ಮಂದಿರ, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪ್ರೇಮಾ ಕೆ ಭಟ್ ಅವರ ಹಿತೈಷಿಗಳು ಭಾಗವಹಿಸಿದ್ದರು.
ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ವಸಂತ ಭಟ್ ತೊಟ್ಟೆತೋಡಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ರಾಜಾರಾಮ ರಾವ್ ಮೀಯಪದವು, ಟಿ ಡಿ ಸದಾಶಿವ ರಾವ್, ಡಾ. ಶ್ರೀಧರ ಭಟ್ ಉಪ್ಪಳ, ಪಿ.ಆರ್. ಶೆಟ್ಟಿ ಪೆÇಯ್ಯೇಲು ಕುಳೂರು, ಪಂಚಾಯತಿ ಸದಸ್ಯ ಜನಾರ್ದನ, ನಾರಯಣ ನಾಯಕ್ ನಡುಹಿತ್ಲು ಕುಳೂರು, ಹರಿಶ್ಚಂದ್ರ ಮಂಜೇಶ್ವರ, ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ, ಜಯಲಕ್ಷ್ಮಿ ಚಿಗುರುಪಾದೆ, ಸತೀಶ್ಚಂದ್ರ ರೈ ದೇರಂಬಳ, ಮೋನಪ್ಪ ಪೂಜಾರಿ ಕಲ್ಕಾರ್ ಮೊದಲಾದವರು ನುಡಿನಮನ ಸಲ್ಲಿಸಿದರು. ಸೇವಾಟ್ರಸ್ಟ್ ನ ಕೋಶಾಧಿಕಾರಿ ಜಗದೀಶ ಶೆಟ್ಟಿ ಎಲಿಯಾಣ ಸ್ವಾಗತಿಸಿ, ಪುಷ್ಪರಾಜ ಶೆಟ್ಟಿ ತಲೇಕಳ ವಂದಿಸಿದರು. ಕಾರ್ಯದರ್ಶಿ ಶ್ರೀಧರ ರಾವ್ ಆರ್.ಎಂ. ನಿರ್ವಹಿಸಿದರು.




.jpg)
