ಕೊಚ್ಚಿ: ಪೆರುಂಬವೂರ್ ಗಾಂಜಾ ಪ್ರಕರಣದ ಆರೋಪಿಗಳ ಪೋನ್‍ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ಆಘಾತಕಾರಿ ದೃಶ್ಯಗಳು ಕಂಡುಬಂದಿದೆ. ಸಂಬಂಧಿಯಾದ ಐದು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ದೃಶ್ಯಗಳನ್ನು ಪೋಲೀಸರು ಪೋನ್‍ನಿಂದ ವಶಪಡಿಸಿಕೊಂಡಿದ್ದಾರೆ.
ಪೋಕ್ಸೋ ಕಾಯ್ದೆಯನ್ನು ವಿಧಿಸಲಾಗಿರುವುದರಿಂದ ಪೋಲೀಸರು ಆರೋಪಿಯ ಹೆಸರನ್ನು ಬಿಡುಗಡೆ ಮಾಡಿಲ್ಲ. ಪೆರುಂಬವೂರು ಪೋಲೀಸ್ ಠಾಣೆಯಲ್ಲಿ ಆರೋಪಿಯ ವಿಚಾರಣೆ ಪ್ರಗತಿಯಲ್ಲಿದೆ.
ನಿನ್ನೆ 120 ಗ್ರಾಂ ಗಾಂಜಾ ಸಹಿತ ಆರೋಪಿಯನ್ನು ಬಂಧಿಸಲಾಗಿತ್ತು. ಆರೋಪಿಗೆ ಠಾಣೆ ಜಾಮೀನು ನೀಡುವ ಮೊದಲು ಪೋಲೀಸರು ಆತನ ಪೋನ್ ಪರಿಶೀಲಿಸಿದ್ದರು. ಇದೇ ವೇಳೆ, ಐದು ವರ್ಷದ ಬಾಲಕಿಯ ಮೇಲೆ ದೌರ್ಜನ್ಯ ನಡೆಸುತ್ತಿರುವ ದೃಶ್ಯಗಳನ್ನು ಪಡೆಯಲಾಯಿತು. ವಿವರವಾದ ತನಿಖೆಯ ಸಮಯದಲ್ಲಿ, ಪೋಲೀಸರು ವಿವಿಧ ದಿನಾಂಕಗಳಲ್ಲಿ ಚಿತ್ರೀಕರಿಸಲಾದ ಹಲವಾರು ರೀತಿಯ ವೀಡಿಯೊಗಳನ್ನು ವಶಪಡಿಸಿಕೊಂಡರು. ಆರೋಪಿಯು ಕೆಲವು ಸಮಯದಿಂದ ಮಗುವಿಗೆ ಕಿರುಕುಳ ನೀಡುತ್ತಿದ್ದ ಎಂದು ವರದಿಯಾಗಿದೆ. ಆತ ಮಾದಕ ವಸ್ತುಗಳ ವ್ಯಸನಿಯಾಗಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ. ಶಂಕಿತನ ಪೋನ್ ಹೆಚ್ಚಿನ ಪರಿಶೀಲನೆಗಾಗಿ ಪೋಲೀೀಸ್ ವಿಧಿವಿಜ್ಞಾನ ವಿಭಾಗಕ್ಕೆ ಕಳುಹಿಸಲಾಗುವುದು.






