ಕಾಸರಗೋಡು: ಕೇರಳ ಸರ್ಕಾರವು ಎಲ್ಲಾ ವಲಯಗಳಲ್ಲಿ ಅಭಿವೃದ್ಧಿಯನ್ನು ಸಾಧ್ಯವಾಗಿಸಿದೆ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಒ.ಆರ್.ಕೇಳು ಹೇಳಿದರು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನ ಭಾಗವಾಗಿ ನೀಲೇಶ್ವರ ಚಿರಪ್ಪುರಂನಲ್ಲಿ ನಿರ್ಮಿಸಲಾದ ನೀಲೇಶ್ವರ ಮಹಾನಗರ ಪಾಲಿಕೆಯ ಪ್ರತ್ಯಾಶ ಬಡ್ಸ್ ಶಾಲೆಯ ಹೊಸ ಕಟ್ಟಡವನ್ನು ;ಲೋಕಾರ್ಪಣೆಗೊಳಿಸಿ ಸಚಿವರು ಮಾತನಾಡುತ್ತಿದ್ದರು.
ಕೇರಳದಲ್ಲಿ ಒಬ್ಬನೇ ಒಬ್ಬ ಹಸಿದ ವ್ಯಕ್ತಿ ಇರಬಾರದು ಎಂಬ ಸರ್ಕಾರದ ನೀತಿಯ ಭಾಗವಾಗಿ, ಸ್ಥಳೀಯಾಡಳಿತ ಸಂಸ್ಥೆಗಳ ಸಹಯೋಗದೊಂದಿಗೆ, ಸರ್ಕಾರವು ತೀವ್ರ ಬಡತನವಿಲ್ಲದ ಕೇರಳ ಉಪಕ್ರಮವನ್ನು ಮುಂದುವರಿಸುತ್ತಿದೆ. ಕೇರಳವು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಎಲ್ಲಾ ಜನರಿಗೆ ಆದಾಯ ಒದಗಿಸಲು ಸೂಕ್ಷ್ಮ ಉದ್ಯಮ ಯೋಜನೆಯನ್ನು ಪ್ರಾರಂಭಿಸಲಾಯಿತು. ಬಂಡವಾಳ ಒದಗಿಸಲು ವಿವಿಧ ಹಣಕಾಸು ಸಂಸ್ಥೆಗಳ ಸಹಯೋಗದೊಂದಿಗೆ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ. ಓಖಿ, ನಿಫಾ, ಕೋವಿಡ್, ಪ್ರವಾಹಗಳಿಂದ ಹಿಡಿದು ಪ್ರಸಕ್ತ ಮಳೆಗಾಲದವರೆಗೆ ಜನರನ್ನು ಒಗ್ಗಟ್ಟಿನಿಂದ ಇರಿಸುವ ಮತ್ತು ಬಲಿಷ್ಠವಾದ ವಿಪತ್ತು ನಿರ್ವಹಣಾ ಚಟುವಟಿಕೆಗಳನ್ನು ನಡೆಸುತ್ತಿರುವ ಸರ್ಕಾರ ಕೇರಳದ್ದಾಗಿದೆ ಎಂದು ಸಚಿವರು ಹೇಳಿದರು.
ಸರ್ಕಾರವು ಬಡ್ಸ್ ಶಾಲೆಯ ಮಕ್ಕಳ ಬಗ್ಗೆಯೂ ಸ್ಪಷ್ಟವಾದ ದೃಷ್ಟಿಕೋನವನ್ನು ಹೊಂದಿದೆ. ಅಂಗವೈಕಲ್ಯವನ್ನು ಹೊರೆಯಾಗಿ ನೋಡುವ ಬದಲು ಅದನ್ನು ನಿವಾರಿಸುವ ಉದ್ದೇಶದಿಂದ ನಾವು ಮುಂದುವರಿಯಬೇಕು ಮತ್ತು ಅದಕ್ಕಾಗಿಯೇ ಕೇರಳ ಸರ್ಕಾರವು ಎಲ್ಲಾ ಪಂಚಾಯತ್ ಮತ್ತು ನಗರಸಭೆಗಳಲ್ಲಿ ಬಡ್ಸ್ ಶಾಲೆಗಳನ್ನು ಪ್ರಾರಂಭಿಸುತ್ತಿದೆ ಎಂದು ಸಚಿವರು ಹೇಳಿದರು. ಬಡ್ಸ್ ಶಾಲೆಗಳು ಅಂಗವಿಕಲ ಮಕ್ಕಳ ಪೋಷಕರಿಗೆ ಭಾವನಾತ್ಮಕ ಬೆಂಬಲವನ್ನು ಒದಗಿಸಲು ಮತ್ತು ಅಂತಹ ಮಕ್ಕಳನ್ನು ಸಂಯೋಜಿಸಲು ಕೆಲಸ ಮಾಡುತ್ತವೆ. ಪ್ರತಿಯೊಂದು ಮಗುವನ್ನು ಒಳಗೊಳ್ಳುವ ಬಡ್ಸ್ ಶಾಲೆಯು ಮಕ್ಕಳ ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಚಿಕಿತ್ಸೆಗಳು ಮತ್ತು ಚಟುವಟಿಕೆಗಳನ್ನು ಒದಗಿಸುತ್ತದೆ. ಮಕ್ಕಳ ತಾಯಂದಿರಿಗೆ ಆದಾಯ ತಂದುಕೊಡುವ ಬಡ್ಸ್ ಶಾಲೆಯ ಕಾರ್ಯವನ್ನು ಸಚಿವರು ಶ್ಲಾಘಿಸಿದರು. ಬಡ್ಸ್ ಶಾಲೆಯಲ್ಲಿರುವ ತಾಯಂದಿರಿಗೆ ವಿವಿಧ ಉತ್ಪನ್ನಗಳನ್ನು ಉತ್ಪಾದಿಸಲು ತರಬೇತಿ ನೀಡಿ ಸಬಲೀಕರಣಗೊಳಿಸಬೇಕು ಎಂದು ಸಚಿವರು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ, ಶಾಸಕ ಎಂ. ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಎಂಜಿನಿಯರ್ ಪಿ.ಸಾಜು ವರದಿ ಮಂಡಿಸಿದರು. ಈ ಕಟ್ಟಡವನ್ನು ರೂ.2,35,80,000.ನಿಧಿ ಬಳಸಿ ನಿರ್ಮಿಸಲಾಗಿದೆ. ನೀಲೇಶ್ವರ ನಗರಸಭೆ ಉಪಾಧ್ಯಕ್ಷ ಪಿ.ಪಿ. ಮುಹಮ್ಮದ್ ರಫಿ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಕೆ.ಪಿ. ರವೀಂದ್ರನ್, ಶಂಸುದೀನ್ ಅರಿಂಜಿರ, ವಿ.ಗೌರಿ, ಲತಾ, ಪಿ.ಭಾರ್ಗವಿ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ವಿ.ಚಂದ್ರನ್, ಕೌನ್ಸಿಲರ್‍ಗಳಾದ ಇ.ಅಶ್ವತಿ, ಕೆ.ಜಯಶ್ರೀ, ದಾಕ್ಷಾಯಣಿ ಕುಂಞÂ್ಞ ಕಣ್ಣನ್, ವಿ.ವಿ. ಶ್ರೀಜಾ, ಮತ್ತು ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಎಂ.ರಾಜನ್, ಎರುವತ್ ಮೋಹನನ್, ಎಂ.ಅಜಿನಾರ್, ಇ.ಎಂ.ಕುಟ್ಟಿಹಾಜಿ, ರಜಾಕ್ ಪುಜಕ್ಕರ, ಪಿ.ಯು. ವಿಜಯಕುಮಾರ್, ಕೈದಪ್ರಂ ಕೃಷ್ಣನ್ ನಂಬಿಯಾರ್, ಸುರೇಶ್ ಪುತಿಯೇಡತ್, ಕೆ.ವಿ. ಚಂದ್ರನ್, ಎಂ.ಜೆ. ಜಾಯ್, ಸಿಡಿಎಸ್ ಅಧ್ಯಕ್ಷ ಪಿ.ಎಂ. ಸಂಧ್ಯಾ, ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ವಿ. ದಾಮೋದರನ್, ಮಾಜಿ ಕೌನ್ಸಿಲರ್ ಎ.ವಿ. ಸುರೇಂದ್ರನ್, ಪ್ರತ್ಯಾಶ ಬಡ್ಸ್ ಶಾಲೆಯ ಪ್ರಾಂಶುಪಾಲೆ ಕೆ.ವಿ. ಜಲಜ, ಪಿಟಿಎ ಅಧ್ಯಕ್ಷ ಎ.ಟಿ. ಕುಮಾರನ್, ನೀಲೇಶ್ವರ ಪ್ರೆಸ್ ಪೋರಂ ಅಧ್ಯಕ್ಷ ಸೇತು ಬಂಗಳಂ ಮತ್ತಿತರರು ಮಾತನಾಡಿದರು. ನೀಲೇಶ್ವರ ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ ಸ್ವಾಗತಿಸಿ, ನಗರಸಭೆ ಕಾರ್ಯದರ್ಶಿ ಕೆ. ಮನೋಜ್ ಕುಮಾರ್ ವಂದಿಸಿದರು.






