ಕಾಸರಗೋಡು: ಗೌರವಧನ ಹೆಚ್ಚಳದೊಂದಿಗೆ ನಿವೃತ್ತಿ ಸೌಲಭ್ಯಗಳನ್ನು ಘೋಷಿಸುವಂತೆ ಒತ್ತಾಯಿಸಿ ಕೇರಳ ಆಶಾ ಆರೋಗ್ಯ ಕಾರ್ಯಕರ್ತರ ಸಂಘವು ರಾಜ್ಯಾದ್ಯಂತ ಹಗಲು ರಾತ್ರಿ ಪ್ರತಿಭಟನೆ ಅಂಗವಾಗಿ ರಾಜ್ಯವ್ಯಾಪಿ ಜಾಥಾ ಕಾಸರಗೋಡಿನಿಂದ ಆರಂಭಗೊಂಡಿತು.
ಸಂಘಟನೆ ರಾಜ್ಯಾಧ್ಯಕ್ಷ ವಿ.ಕೆ ಸದಾನಂದನ್ ಅವರು ಜಾಣಾ ನಾಯಕಿ, ಸಂಘಟನೆ ಪ್ರಧಾನ ಕಾರ್ಯದರ್ಶಿ ಎಂ. ಎ. ಬಿಂದು ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಈ ಬಗ್ಗೆ ಕಾಸರಗೊಡಿನಲ್ಲಿ ಆಯೋಜಿಸಲಾಗಿದ್ದ ಸಮಾರಂಭವನ್ನು ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸಿದರು. ವಿ.ಕೆ ರವೀಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ರಾಜ್ಯವ್ಯಾಪಿ ಮುಷ್ಕರದ ನೇತೃತ್ವ ವಹಿಸಿರುವ ಸಂಘಟನೆ ಪ್ರಧಾನ ಕಾರ್ಯದರ್ಶಿ ಎಂ.ಎ ಬಿಂದು ಅವರನ್ನು ಅಭಿನಂದಿಸಲಾಯಿತು. ಶಾಸಕ ಎ.ಕೆ ಎಂ ಅಶ್ರಫ್, ಡಾ. ಆಸಾದ್ ಮುಖ್ಯ ಭಾಷಣ ಮಾಡಿದರು. ನಗರಸಭಾಧ್ಯಕ್ಷ ಅಬ್ಬಸ್ ಬೀಗಂ, ಅಜಯ್‍ಕುಮಾರ್ ಕೋಡೋತ್, ಕುಂಬ್ಡಾಜೆ ಗ್ರಾಪಂ ಅಧ್ಯಕ್ಷ ಹಮೀದ್ ಪಿ, ಟಿ.ಕೆ ವಿನೋದ್, ಡಾ. ಡಿ. ಸಉರೇಂದ್ರನಾಥ್, ಪಿ.ಪಿ ಕುಞಂಬು, ಲಕ್ಷ್ಮೀ ತಂಬಾನ್ ಉಪಸ್ಥಿತರಿದ್ದರು. ವಿ.ಕೆ ಶೀಲಾ ಸ್ವಾಗತಿಸಿದರು.





