ಕಾಸರಗೋಡು: ರಾಜ್ಯ ಕ್ರೀಡಾ ಇಲಾಖೆಯ ನೇತೃತ್ವದಲ್ಲಿ ಆಯೋಜಿಸಿರುವ 'ಕಿಕ್ ಡ್ರಗ್ಸ್' ಮಾದಕ ದ್ರವ್ಯ ಮುಕ್ತ ಅಭಿಯಾನದ ರಾಜ್ಯಮಟ್ಟದ ಪ್ರಚಾರ ಅಭಿಯಾನದ ಉದ್ಘಾಟನೆ ಕಾಸರಗೋಡಿನಲ್ಲಿ ಸೋಮವಾರ ಜರುಗಿತು. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ವಠಾರದಿಂದ ಕಾಸರಗೋಡು ಹೊಸ ಬಸ್ ನಿಲ್ದಾಣ ವರೆಗೆ ಆಯೋಜಿಸಲಾಗಿದ್ದ ಮ್ಯಾರಥಾನ್‍ಗೆ ಸಚಿವ ಅಬ್ದುಲ್ ರಹಮಾನ್ ಧ್ವಜ ತೋರಿಸಿ ಚಾಲನೆ ನೀಡಿದರು. ಇದಕ್ಕೂ ಮೊದಲು ಸಚಿವರು ಸಿವಿಲ್‍ಸ್ಟೇಶನ್ ವಠಾರದ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಕಾಸರಗೋಡು ಹೊಸ ಬಸ್‍ನಿಲ್ದಾಣ ವಠಾರದಲ್ಲಿ ನಡೆದ ಸಮಾರಂಭವನ್ನು ಮುಕ್ಯಮಂತ್ರಿಪಿಣರಾಯಿ ವಿಜಯನ್ ಆನ್‍ಲೈನ್ ಮೂಲಕ ಉದ್ಘಾಟಿಸಿದರು. ಕ್ರೀಡಾ ಸಚಿವ ವಿ. ಅಬ್ದುರಹಿಮಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪಿ. ಹಬೀಬ್ ರೆಹಮಾನ್ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆಯನ್ನು ಬೋಧಿಸಿದರು. ತೃಕರಿಪುರ ಶಾಸಕ ಎಂ.ರಾಜಗೋಪಾಲನ್, ಉದುಮ ಶಾಸಕ ಸಿ.ಎಚ್. ಕುಂಞಂಬು, ಕಾಞಂಗಾಡ್ ಶಾಸಕ ಇ.ಚಂದ್ರಶೇಖರನ್, ಕಾಸರಗೋಡು ನಗರಸಭೆ ಅಧ್ಯಕ್ಷೆ ಅಬ್ಬಾಸ್ ಬೇಗಂ, ಜಿಲ್ಲಾಧಿಕಾರಿ ಕೆ.ಇನ್ಬಾಶೇೀಖರ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ, ರಾಜ್ಯ ಕ್ರೀಡಾ ಮಂಡಳಿ ಅಧ್ಯಕ್ಷ ಯು.ಶರಫಲಿ, ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಜಗದೀಶ್ ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸ್ವಾಗತಿಸಿದರು. ಜಿಲ್ಲಾ ಕ್ರೀಡಾ ಮಂಡಳಿ ಕಾರ್ಯದರ್ಶಿ ಪ್ರದೀಪನ್ ಎ.ವಿ. ವಂದಿಸಿದರು.
ಖೇಲೋ ಇಂಡಿಯಾ ವಿದ್ಯಾರ್ಥಿಗಳು ಹಾಗೂ ಚೆರುವತ್ತೂರು ಕೈರಳಿ ಪೂರಕ್ಕಳಿ ತಂಡದಿಂದ ಫೆನ್ಸಿಂಗ್ ಕಾರ್ಯಕ್ರಮ ನಡೆಯಿತು. ಚೆರುವತ್ತೂರು ಕೈರಳಿ ಕಲರಿ ಸಂಘದಿಂದ ಪೂರಕಳ್ಳಿ ಮತ್ತು ಕಲರಿಪಯಟ್ಟು, ಯೋಗ ಸಂಘದಿಂದ ಯೋಗ, ತಾಯ್ಕೊಂಡೋ ಅಸೋಸಿಯೇಷನ್ ವತಿಯಿಂದ ತೈಕೊಂಡೋ, ವ್ಯಸನ ವಿರುದ್ಧ ನೃತ್ಯ ಶಿಲ್ಪ, ಜುಂಬಾ ನೃತ್ಯ ಪ್ರದರ್ಶನಗೊಂಡಿತು.




.jpeg)

