ಕಾಸರಗೋಡು: ಕೆಎಸ್‍ಟಿಪಿ ರಸ್ತೆ ಕೆಳಗಿನ ಕಳ್ನಾಡು ಬಸ್‍ನಿಲ್ದಾಣ ಸನಿಹ ಸೋಮವಾರ ಬೆಳಗ್ಗೆ ಎರಡು ಕಾರುಗಳು ಪರಸ್ಪರ ಡಿಕ್ಕಿಯಾಗಿ ಒಬ್ಬ ಮೃತಪಟ್ಟಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ. ಬೇಕಲ ಮಲಾಂಕುನ್ನು ತಲ್ಲಾಣಿ ನಿವಾಸಿ ಎ. ಅನಂತು(26)ಮೃತಪಟ್ಟವರು. ಗಾಯಾಳುಗಳಾದ ಪ್ರಣವ್ ಮತ್ತು ಅಕ್ಷಯ್ ಅವರನ್ನು ಮಂಗಳೂರು ಹಾಗೂ ಸೌರವ್ ಮತ್ತು ಅಶ್ವಿನ್ ಅವರನ್ನು ಕಾಸರಗೋಡಿನ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಮೇಲ್ಪರಂಬ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




