ಕಾಸರಗೋಡು: ವ್ಯಾಪಾರಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಹಣ ಮತ್ತು ಮೊಬೈಲ್ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೂಡ್ಲು ಶಾಸ್ತಾ ನಗರ ನಿವಾಸಿ ಅಮಾನ್ ಸುಜಾದ್ ಎಂಬಾತನನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾನಗರದಲ್ಲಿ ಶವರ್ಮ ವ್ಯಾಪಾರಿಯಾಗಿರುವ ಮೊಯ್ದೀನ್ ರಂಶೀದ್ ಎಂಬವರ ಮೇಲೆ ಏ. 22ರಂದು ಹಲ್ಲೆ ನಡೆಸಿ, ಅವರ ವಶದಲ್ಲಿದ್ದ 16ಸಾವಿರ ರೂ. ನಗದು ಹಾಘೂ ಮೊಬೈಲ್ ಕಸಿದುಪರಾರಿಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಡಿವೈಎಸ್ಪಿ ಸಿ.ಕೆ ಸುನಿಲ್ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಪಿ. ನಳಿನಾಕ್ಷನ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.




