ಪೆರ್ಲ: ಉಕ್ಕಿನಡ್ಕ ವಸಿಷ್ಠಾಶ್ರಮ ಕಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಂಭ್ರಮದಲ್ಲಿದ್ದು, ನೂತನ ಶತಮಾನೋತ್ಸವ ಕಟ್ಟಡದ ಉದ್ಘಾಟನೆಯೊಂದಿಗೆ ಕಾರ್ಯಕ್ರಮ ಮೇ 16ಹಾಗೂ 17ರಂದು ಜರುಗಲಿದೆ. 1926ರಲ್ಲಿ ವೈದ್ಯ ಶಂಕರನಾರಾಯಣ ಭಟ್ ಅವರಿಂದ ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡ ಶಾಲೆ ಒಂದರಿಂದ ನಾಲ್ಕನೇ ತರಗತಿ ವರೆಗೆ ಕನ್ನಡ ಮತ್ತು ಮಲಯಾಳ ಮಾಧ್ಯಮದಲ್ಲಿ ವಿದ್ಯಾದಾನ ಮಾಡುತ್ತಿದೆ.
16ರಂದು ಬೆಳಗ್ಗೆ ವಸಿಷ್ಠಾಶ್ರಮ ಸಂಘದ ಅಧ್ಯಕ್ಷ ಡಾ. ಪಿ.ಕೆ ಶಂಕರನಾರಾಯಣ ಭಟ್ ಧ್ವಜಾರೋಹಣ ನಡೆಸುವರು. ಗಣಪತಿ ಹೋಮ, 11ಕ್ಕೆ ಸಭಾ ಕಾರ್ಯಕ್ರಮ ನಡೆಯುವುದು. ಶಾಲಾ ನೂತನ ಕಟ್ಟಡವನ್ನು ಕಾಂಚಿ ಕಾಮಕೋಟಿ ಪೀಠಂನ ಶ್ರೀ ಶಂಕರವಿಜಯೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ವೈದ್ಯ ಶಂಕರನಾರಾಯಣ ಭಟ್ಟ ಸ್ಮಾರಕ ಸುಜ್ಞಾನ ಮಂದಿರವನ್ನು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಲೋಕಾರ್ಪಣೆಗೈದು ಆಶೀರ್ವಚನ ನಿಡುವರು.
ಡಾ. ಪಿ.ಕೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ವಿ. ಬೇವಿನಮರದಹಾಗೂ ರೂಪಾ ಬಾಳಿಗ ಮಂಗಳೂರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. 17ರಂದು ಮಧ್ಯಾಹ್ನ 3.30ಕ್ಕೆ ಸಭಾ ಕಾರ್ಯಕ್ರಮ ನಡೆಯುವುದು. ಎಣ್ಮಕಜೆ ಗ್ರಾಪಂ ಅಧ್ಯಕ್ಷ ಜೆ.ಎಸ್ ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ಶಾಸಕರಾದ ಎನ್.ಎ ನೆಲ್ಲಿಕುನ್ನು ಶಾಲಾ ಮೈದಾನ, ಕೆ.ಎಂ ಅಶ್ರಫ್ ನೂತನ ಕಾಂಕ್ರೀಟು ರಸ್ತೆ, ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್ ಭೋಜನ ಕೊಠಡಿ, ಎಣ್ಮಕಜೆ ಗ್ರಾಪಂ ವತಿಯಿಂದ ಲಭಿಸಿದ ವಿವಿಧ ಸವಲತ್ತುಗಳನ್ನು ಉಪಾಧ್ಯಕ್ಷೆ ರಮ್ಲಾ ಉದ್ಘಾಟಿಸುವರು. ಬೆಂಗಳೂರು ವಿಭಾಗ ಪೊಲೀಸ್ ವರಿಷ್ಠಾಧಿಕಾರಿ ಪಿ.ಎ ಸಐಮನ್ ಅತಿಥಿಯಾಗಿ ಭಾಗವಹಿಸುವರು. ಸಂಜೆ 6ರಿಂದ ಅಂಗನವಾಡಿ, ಶಾಲಾ ಮಕ್ಕಳು ಹಾಗೂ ಹಳೇ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು.




