ಕಾಸರಗೋಡು : ನೋರ್ತ್ ಮಲಬಾರ್ ಗ್ರಾಮೀಣ ಬೇಂಕಿನ ನಿವೃತ್ತ ರೀಜಿನಲ್ ಮೇನೇಜರ್ ಹಾಗೂ ರಾಮಕ್ಷತ್ರಿಯ ಸಮಾಜದ ನೇತಾರ, ಕಾಸರಗೋಡು ಅಣಂಗೂರು ನಿವಾಸಿ ಕಮಲಾಕ್ಷ ಕಲ್ಲಗದ್ದೆ (72)ಹೃದಯಾಘಾತದಿಂದ ಭಾನುವಾರ ನಿಧನರಾದರು.
ಎಡನೀರು ಬಳಿಯ ಕಲ್ಲಗದ್ದೆ ಮನೆತನದ ಪ್ರಮುಖರಾಗಿದ್ದ ಅವರು ರಾಮರಾಜ ಕ್ಷತ್ರಿಯ ಸಮಾಜ ಸಂಘಟನೆಯ ಜಿಲ್ಲಾಧ್ಯಕ್ಷರಾಗಿದ್ದರು. ಎಡನೀರಿನ ಗಣೇಶೋತ್ಸವ ಸಹಿತ ಹಿಂದೂ ಧಾರ್ಮಿಕ ಚಟುವಟಿಕೆಗಳ ಮುಂಚೂಣಿ ಕಾರ್ಯಕರ್ತರಾಗಿದ್ದರು. ಎಡನೀರು ಮಠದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲೂ ಸಕ್ರಿಯವಾಘಿ ಪಾಲ್ಗೊಳ್ಳುವ ಮೂಲಕ ಸಮಾಜಿಕವಾಗಿ ಸಕ್ರಿಯರಾಗಿದ್ದರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.





