ಕಾಸರಗೋಡು : ನೇತ್ರ ಚಿಕಿತ್ಸೆ ಉಚಿತ ಶಿಬಿರ ನಗರದ ತಾಳಿಪಡ್ಪು ಹೋಟೆಲ್ ಉಡುಪಿ ಗಾರ್ಡನ್ ನ ಮಥುರಾ ಸಭಾಂಗಣದಲ್ಲಿ ನಡೆಯಿತು.
ಹೋಟೆಲ್ ಉಡುಪಿ ಗಾರ್ಡನ್, ಪ್ರಸಾದ್ ನೇತ್ರಾಲಯ ಕಾಸರಗೋಡು, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್, ಕೇರಳ ಹೋಟೆಲ್ ಮತ್ತು ರೆಸ್ಟಾರೆಂಟ್ ಅಸೋಸಿಯೇಶನ್ ಜಿಲ್ಲಾ ಸಮಿತಿ ಕಾಸರಗೋಡು ನಗರಸಭೆಯ 4,5,33ರ ಸದಸ್ಯೆಯರು ಜಂಟಿ ವತಿಯಿಂದ ಶಿಬಿರ ನಡೆಯಿತು. ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ಡಾ.ಸಾಗರ್ ಅವರ ನೇತೃತ್ವದಲ್ಲಿ, ಸಿಬ್ಬಂದಿ ವರ್ಗದಿಂದ ಶಿಬಿರ ನಡೆಯಿತು. ನೂರಾರು ಮಂದಿ ಭಾಗವಹಿಸಿದರು. ಶಿಬಿರದಲ್ಲಿ ಭಾಗಿಗಳಾದವರಲ್ಲಿ ಅರ್ಹರಾದವರಿಗೆ ಹೋಟೆಲ್ ಉಡುಪಿ ಗಾರ್ಡನ್ ವತಿಯಿಂದ ಉಚಿತವಾಗಿ ಕನ್ನಡಕ ವಿತರಿಸಲಾಯಿತು. ಪ್ರಸಾದ್ ನೇತ್ರಾಲಯ ವತಿಯಿಂದ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ಸೌಲಭ್ಯ ಮತ್ತು ಕನ್ನಡಕ ವಿತರಣೆಯ ಸೌಲಭ್ಯ ನೀಡಲಾಗಿತ್ತು.
ಈ ಸಂಬಂಧ ನಡೆದ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಅಬ್ಬಾಸ್ ಬೀಗಂ ಶಿಬಿರವನ್ನು ಉದ್ಘಾಟಿಸಿದರು. ಹೋಟೆಲ್ ಉಡುಪಿ ಗಾರ್ಡನ್ ಮಾಲೀಕ ರಾಮಪ್ರಸಾದ್ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನೇತ್ರ ತಜ್ಞ, ಧಾರ್ಮಿಕ ಮುಂದಾಳು ಡಾ.ಅನಂತ ಕಾಮತ್, ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷೆ ಅಶ್ವಿನಿ ಎಂ.ಎಲ್., ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ಡಾ.ಸಾಗರ್, ಕೇರಳ ಹೋಟೆಲ್ ಮತ್ತು ರೆಸ್ಟಾರೆಂಟ್ ಅಸೋಸಿಯೇಶನ್ ರಾಜ್ಯ ಸಮಿತಿ ಕಾರ್ಯದರ್ಶಿ ಅಹಮ್ಮದ್ ಗಝಾಲಿ, ಜಿಲ್ಲಾ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಕಾರ್ಯದರ್ಶಿ ಬಿಜು ಚುಳ್ಳಿಕ್ಕರೆ ಮುಖ್ಯ ಅತಿಥಿಯಾಗಿದ್ದರು. ನಗರಸಭೆ ಸದಸ್ಯರಾದ ಅಸ್ವಿನಿ ನಾಯಕ್, ಹೇಮಲತಾ, ವೀಣಾ ಅರುಣ್, ಹೋಟೆಲ್ ವಸಂತ ವಿಹಾರ್ ಮಾಲೀಕ ವಸಂತ್ ಕುಮಾರ್, ಹೋಟೆಲ್ ಉಡುಪಿ ಗಾರ್ಡನ್ ಪಾಲುದಾರರಾದ ಮಹೇಶ್ ಭಟ್, ರಾಹುಲ್ ಭಟ್, ಅಕ್ಷರಾ ರಾಹುಲ್ ಇತರರು ಇದ್ದರು. ಕೀರ್ತನಾ ರಾಹುಲ್ ಸ್ವಾಗತಿಸಿದರು. ಪತ್ರಕರ್ತ ವೀಜಿ. ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಸುಚಿತ್ರಾ ಮಹೇಶ್ ವಂದಿಸಿದರು.






