ಸಮರಸ ಚಿತ್ರಸುದ್ದಿ: ಪೆರ್ಲ: ಬಿರುಸಿನ ಮಳೆಗೆ ಎಣ್ಮಕಜೆ ಪಂಚಾಯಿತಿ ಪಡ್ರೆ ಸಾಲೆತ್ತಡ್ಕ ನಿವಾಸಿ, ಪೆರ್ಲ ಶಾಲಾ ಶಿಕ್ಷಕ ವೇಣುಗೋಪಾಲ್ ಅವರ ಮನೆ ಸನಿಹದ ಹಟ್ಟಿ ಹಾಗೂ ಬಚ್ಚಲು ಮನೆಒಳಗೊಂಡ ಕಟ್ಟಡಕ್ಕೆ ಬೃಹತ್ ತೆಂಗಿನ ಮರ ಉರುಳಿಬಿದ್ದ ಪರಿಣಾಮ ಭಾರೀ ಹಾನಿ ಸಂಭವಿಸಿದೆ. ಸಾವಿರಕ್ಕೂ ಹೆಚ್ಚು ಹೆಂಚು ಹಾಗೂ ಕಬ್ಬಿಣದ ಮಹಡಿ ಹಾನಿಗೀಡಾಗಿದ್ದು, ಒಂದು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.


