HEALTH TIPS

ಮುಂದಿನ ಐದು ವರ್ಷಗಳಲ್ಲಿ ಬೀದಿ ನಾಯಿ ಮುಕ್ತ ಕೇರಳವನ್ನು ಸಾಕಾರಗೊಳಿಸಲಾಗುವುದು; ಸಚಿವೆ ಚಿಂಜುರಾಣಿ

ಕಾಸರಗೋಡು: ಪ್ರಾಣಿ ಕಲ್ಯಾಣ ಕಾನೂನುಗಳು ಕಠಿಣವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಬೀದಿ ನಾಯಿಗಳ ಸಂಖ್ಯೆಯಲ್ಲಿನ ತ್ವರಿತ ಹೆಚ್ಚಳವನ್ನು ತಡೆಯಲು ಎಬಿಸಿ ಕೇಂದ್ರಗಳ ಚಟುವಟಿಕೆಗಳು ಸಹಾಯ ಮಾಡುತ್ತವೆ ಎಂದು ಪಶುಸಂಗೋಪನೆ ಮತ್ತು ಡೈರಿ ಅಭಿವೃದ್ಧಿ ಸಚಿವೆ ಜೆ. ಚಿಂಜು ರಾಣಿ ಹೇಳಿದರು.

ಮುಳಿಯಾರ್ ನಲ್ಲಿ ಪಶುಸಂಗೋಪನಾ ಇಲಾಖೆಯಿಂದ ಪ್ರಾರಂಭಿಸಲಾದ ರಾಜ್ಯದ ಮೂರನೇ ಎಬಿಸಿ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಸಚಿವರು ಮಾತನಾಡುತ್ತಿದ್ದರು.


2030 ರ ವೇಳೆಗೆ ಬೀದಿ ನಾಯಿ ಮುಕ್ತ ಕೇರಳದ ಕನಸನ್ನು ನನಸಾಗಿಸಬಹುದು ಮತ್ತು ಸರ್ಕಾರ ಇದಕ್ಕಾಗಿ ಪ್ರಯತ್ನಗಳಿಗೆ ನೇತೃತ್ವ ವಹಿಸಲಿದೆ ಎಂದು ಸಚಿವರು ಹೇಳಿದರು. ಕೇರಳದಲ್ಲಿ ಸುಮಾರು 3.5 ಲಕ್ಷ ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದ್ದು, ಅವುಗಳ ದಾಳಿಯಿಂದ ಯುವ ಜೀವಗಳು ಬಲಿಯಾಗುವ ಪರಿಸ್ಥಿತಿ ನೋವಿನಿಂದ ಕೂಡಿದೆ ಎಂದು ಸಚಿವರು ಹೇಳಿದರು. ಆರಂಭಿಕ ದಿನಗಳಲ್ಲಿ ಕುಟುಂಬಶ್ರೀ ಕಾರ್ಯಕರ್ತರು ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆಗಾಗಿ ತಂದಿದ್ದ ವ್ಯವಸ್ಥೆಯಿಂದ, ನ್ಯಾಯಾಲಯದ ಹಸ್ತಕ್ಷೇಪದ ಮೂಲಕ ಈ ಉದ್ದೇಶಕ್ಕಾಗಿ ವಿಶೇಷ ತರಬೇತಿ ಪಡೆದ ಜನರನ್ನು ಬಳಸಿಕೊಳ್ಳುವವರೆಗೆ ಪ್ರಮುಖ ಬದಲಾವಣೆಯಾಗಿದೆ ಎಂದು ಸಚಿವರು ವಿವರಿಸಿದರು. ಒಂದೂ ಮುಕ್ಕಾಲು ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಎಬಿಸಿಯ ಕೆಲಸದಲ್ಲಿ ಮುತುವರ್ಜಿ ವಹಿಸಿದ ತ್ರಿಸ್ಥರ ಪಂಚಾಯತಿಗಳನ್ನು ಸಚಿವರು ಶ್ಲಾಘಿಸಿದರು. ಎಬಿಸಿ ಕೇಂದ್ರಗಳಿಗೆ ಅಗತ್ಯವಿರುವ ಲಸಿಕೆಗಳನ್ನು ಪೂರೈಸುವ ಇಂಡಿಯನ್ ಇಮ್ಯುನೊಲಾಜಿಕಲ್ ಲಿಮಿಟೆಡ್ ಕಂಪನಿಯು ಮೊಬೈಲ್ ಎಬಿಸಿ ಘಟಕಗಳನ್ನು ಪ್ರಾರಂಭಿಸಲು ಅಗತ್ಯ ಸಹಾಯವನ್ನು ನೀಡಲಿದ್ದು, ಈ ಮೂಲಕ ಹೆಚ್ಚಿನ ಸಂಖ್ಯೆಯ ಬೀದಿ ನಾಯಿಗಳಿರುವ ಪ್ರದೇಶಗಳಿಗೆ ತೆರಳಿ ಜನವಸತಿಯಿಲ್ಲದ ಪ್ರದೇಶಗಳಲ್ಲಿ ಅವುಗಳನ್ನು ಸಂತಾನಹರಣಗೊಳಪಡಸಿ ನಾಲ್ಕು ದಿನಗಳವರೆಗೆ ನಿರೀಕ್ಷಿಸುವ ವ್ಯವಸ್ಥೆಗೆ ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು.

ಉದುಮ ಶಾಸಕ ವಕೀಲ ಸಿ.ಎಚ್.ಕುಂಞಂಬು ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪಶುಸಂಗೋಪನಾ ಇಲಾಖೆಯ ನಿರ್ದೇಶಕ ಆಸಿಫ್ ಕೆ.ಯೂಸುಫ್ ವರದಿ ಮಂಡಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಕಾಸರಗೋಡು ನಗರಸಭೆ ಅಧ್ಯಕ್ಷ ಅಬ್ಬಾಸ್ ಬೇಗಂ, ಪಂಚಾಯಿತಿ ಅಧ್ಯಕ್ಷರ ಸಂಘದ ಅಧ್ಯಕ್ಷೆ ಎ.ಪಿ.ಉಷಾ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಕೃಷ್ಣನ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ. ಸರಿತಾ ಎಸ್.ಎನ್, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಮನು ಎಂ, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಶಕುಂತಳಾ, ಮುಳಿಯಾರು ಪಂಚಾಯಿತಿ ಅಧ್ಯಕ್ಷೆ ಪಿ.ವಿ. ಮಿನಿ, ಕಾರಡ್ಕ ಬ್ಲಾಕ್ ಪಂಚಾಯತಿ ಸದಸ್ಯ ಎಂ.ಕುಂಞಂಬು ನಂಬಿಯಾರ್, ಮುಳಿಯಾರ್ ಪಂಚಾಯತಿ ಸದಸ್ಯ ರಮೇಶನ ಮುದಲಪ್ಪಾರ, ಎಲ್ ಎಸ್ ಜಿಡಿ ಜಂಟಿ ನಿರ್ದೇಶಕ ಜಿ ಸುಧಾಕರನ್, ಜಿಲ್ಲಾ ಪಶುಪಾಲನಾ ಅಧಿಕಾರಿ ಪಿ.ಕೆ. ಮನೋಜ್‍ಕುಮಾರ್

ಎಂ ಮಾಧವನ್, ಸಿ ಅಶೋಕ್ ಕುಮಾರ್, ಕೆ ಎಂ ಮುನೀರ್, ಎ ಬಿ ಶಾಫಿ, ಮತ್ತು ಎಂ ಎಲ್ ಅಶ್ವನಿ ಸಹಿತ ಸಮುದಾಯದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರತೀಯ ಪಶುವೈದ್ಯ ಸಂಘದ ಜಿಲ್ಲಾ ಅಧ್ಯಕ್ಷ ಡಾ. ಎ ಮುರಳೀಧರನ್, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಶ್ಯಾಮಲಕ್ಷ್ಮಿ ಮತ್ತಿತರರು ಭಾಗವಹಿಸಿದ್ದರು. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸ್ವಾಗತಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries