ಬದಿಯಡ್ಕ: ಇಂಗ್ಲೆಂಡಿನ ಪ್ಲೀಟ್ ನಗರದ ಟೌನ್ ಕೌನ್ಸಿಲ್ ನಲ್ಲಿ ಕೌನ್ಸಿಲರ್ ಆಗಿ ಕುಮಾರ್ ಕುಂಟಿಕಾನಮಠ 3 ವರುಷಗಳ ನಂತರ ಮರು ಆಯ್ಕೆ ಆಗಿದ್ದಾರೆ. ಸುಮಾರು 25 ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿರುವ ಕುಮಾರ್ ಕುಂಟಿಕಾನಮಠ ಅವರು ಕಾಸರಗೋಡಿನ ಹಿರಿಯ ಸಾಹಿತಿ ದಿ. ವಿದ್ವಾನ್ ಕುಂಟಿಕಾನಮಠ ಬಾಲಕೃಷ್ಣ ಭಟ್ ಮತ್ತು ರುಕ್ಮಿಣಿ ಬಾಲಕೃಷ್ಣ ಭಟ್ ರವರ ಪುತ್ರ. ಕಾಸರಗೋಡಿನ ಕುಂಟಿಕಾನಮಠ ಕ್ಷೇತ್ರದ ಆಡಳಿತ, ಆರಾಧಕ ಮನೆಯವರಾದ ಇವರು ಇಂಗ್ಲೆಂಡಿನಲ್ಲಿ ಕೌನ್ಸಿಲರ್ ಆಗಿ ಆಯ್ಕೆಯಾಗಿರುವುದು ಭಾರತೀಯರಿಗೆ ಹೆಮ್ಮೆ ತಂದಿದೆ.




-KUMAR%20KUNTIKANA%20MATT.jpg)
