HEALTH TIPS

ಮಾದ್ವ ಬ್ರಾಹ್ಮಣ ರಾಜ್ಯ ಸಮ್ಮೇಳನ ಸಂಪನ್ನ

ಬದಿಯಡ್ಕ: ಕೇರಳ ರಾಜ್ಯ ಶಿವಳ್ಳಿ ಬ್ರಾಹ್ಮಣ ಸಮುದಾಯದ ಸಂಘಟನೆಯಾದ ಉಡುಪಿ ಮಾಧ್ವ ಬ್ರಾಹ್ಮಣ ಸಭಾ(ಕೇರಳ)ದ 44ನೇ ಕೇರಳ ರಾಜ್ಯ ಸಮ್ಮೇಳನ ಇತ್ತೀಚೆಗೆ ಎಡನೀರು ಮಠದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗಣಪತಿ ಹೋಮ, ಧ್ವಜವಂದನೆ, ಮಹಿಳಾ ರಾಜ್ಯ ಸಮ್ಮೇಳನ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಮುದಾಯದ ವಿವಿಧ ಘಟಕಗಳ ಸದಸ್ಯರಿಂದ ಯಕ್ಷ ನೃತ್ಯ, ಯೋಗ ನೃತ್ಯ, ಭಜನೆ, ತಿರುವಾದಿರಕ್ಕಳಿ ಮೊದಲಾದ ಕಾರ್ಯಕ್ರಮಗಳು ಜರುಗಿತು. 

ಅಪರಾಹ್ನ ನಡೆದ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಉದ್ಘಾಟಿಸಿದರು. ಕಾಸರಗೋಡು ಲೋಕಸಭಾ ಸದಸ್ಯ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಮಕೃಷ್ಣ ಪೋತ್ತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದಲ್ಲಿ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎ. ಹರಿಕೃಷ್ಣನ್ ಪೋತ್ತಿ, ವಿವಿಧ ಘಟಕಗಳ ಮುಖಂಡರಾದ ವೇಣುಗೋಪಾಲ ಪೋತ್ತಿ, ಪ್ರೊ. ಎ.ಕೆ. ಹರಿದಾಸ್, ವೇಣುಗೋಪಾಲ ಎಂಬ್ರಾಂದ್ರಿ, ಎಂ.ಜಿ. ವಿಕ್ರಮನ್, ಕೆ ರಾಘವೇಂದ್ರನ್, ಪ್ರೊ. ರಾಮಚಂದ್ರನ್, ಎನ್. ವಿಶ್ವನಾಥನ್, ಡಾ. ಬಂಬ್ರಾಣ ಸೀತಾರಾಮ ಕಡಮಣ್ಣಾಯ, ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ಮಂಜುನಾಥ ಟಿ.ಕೆ, ಕಾರ್ಯದರ್ಶಿ ಚೇತನ್ ರಾಮ್,  ಸಮ್ಮೇಳನದ ಸಂಚಾಲಕ ಕೆ. ಸತ್ಯನಾರಾಯಣ ತಂತ್ರಿ, ಮಹಿಳಾ ಘಟಕದ ಮುಖಂಡರಾದ ರುಕ್ಮಿಣಿ, ಸ್ವಯಂಪ್ರಭಾ ದೇವಿ ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಧ್ವ ಬ್ರಾಹ್ಮಣ ಸಭಾದ ಪೋಷಕರನ್ನು, ವಿವಿಧ ಘಟಕಗಳ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಸಮುದಾಯದ ಹಿರಿಯ ಸಾಧಕರಿಗೆ ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಮ್ಮೇಳನದಲ್ಲಿ ಸುಮಾರು 13 ಘಟಕಗಳ 200ಕ್ಕೂ ಮಿಕ್ಕಿದ ಮಂದಿ ಭಾಗವಹಿಸಿದ್ದರು. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries