ಕಾಸರಗೋಡು: ಕೆಎಸ್‍ಇಬಿ ಕಾಸರಗೋಡು ವೃತ್ತದ ವ್ಯಾಪ್ತಿಯಲ್ಲಿ ಮಳೆಗಾಲಕ್ಕೆ ಸಂಬಂಂಧಿಸಿ ಕೆಎಸ್‍ಇಬಿ ಕಾಸರಗೋಡು ವೃತ್ತದ ವ್ಯಾಪ್ತಿಯಲ್ಲಿ ಮಳೆಗಾಲಕ್ಕೆ ಸಂಬಂಧಿಸಿದ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು 24 ತಾಸುಗಳ ಕಾಲ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿ ಚಟುವಟಿಕೆ ಆರಂಭಿಸಿರುವುದಾಗಿ ಕಾಸರಗೋಡು ವಿದ್ಯುತ್ ವೃತ್ತದ ಉಪ ಮುಖ್ಯ ಎಂಜಿನಿಯರ್ ಪ್ರಕಟಣೆ ತಿಳಿಸಿದೆ.
ವಿದ್ಯುತ್ ತಂತಿಗಳು ತುಂಡಾಗಿ ಬೀಳುವ, ವಿದ್ಯುತ್ ತಂತಿಗಳಿಗೆ ಸ್ಪರ್ಶಿಸುವ ಯಾವುದೇ ಇತರ ತುರ್ತು ಸಂದರ್ಭದಲ್ಲಿ, ಗ್ರಾಹಕರು ನಿಯಂತ್ರಣ ಕೊಠಡಿ ಸಂಖ್ಯೆ (9496011431) ಸಂಪರ್ಕಿಸಬಹುದು. ಅಲ್ಲದೆ, ಗ್ರಾಹಕರು ಟೋಲ್-ಫ್ರೀ ಸಂಖ್ಯೆ 9496010101 ಗೆ ವರದಿ ಮಾಡಬಹುದು. ಸಾಮಾನ್ಯ ವಿದ್ಯುತ್ ಕಡಿತಕ್ಕೆ, ಟೋಲ್-ಫ್ರೀ ಸಂಖ್ಯೆ 1912 ಗೆ ಕರೆ ಮಾಡಿ, ಗ್ರಾಹಕ ಸಂಖ್ಯೆ ಮತ್ತು ಫೆÇೀನ್ ಸಂಖ್ಯೆ ನೀಡುವ ಮೂಲಕ ದೂರು ದಾಖಲಿಸಬಹುದು. ದೂರುಗಳನ್ನು ವಾಟ್ಸಾಪ್ ಸಂಖ್ಯೆ 9496001912 ಮೂಲಕವೂ ನೋಂದಾಯಿಸಬಹುದು. ವಿದ್ಯುತ್ ಕಡಿತದ ಕುರಿತು ಎಸ್‍ಎಂಎಸ್ ಸಂದೇಶಗಳನ್ನು ಸ್ವೀಕರಿಸಲು ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಕೆಎಸ್‍ಇಬಿವೆಬ್‍ಸೈಟ್‍ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.





