ಮಂಜೇಶ್ವರ: ದೇಶೀಯ ಅಧ್ಯಾಪಕ ಪರಿಷತ್(ಎನ್.ಟಿ.ಯು.) ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಸ್ಥಾಪನಾ ದಿನಾಚರಣೆ ಹಾಗೂ ಏಕದಿನ ಪ್ರಶಿಕ್ಷಣ ಶಿಬಿರ ಎನ್.ಟಿ.ಯು.ರಾಜ್ಯ ಸಮಿತಿ ಸದಸ್ಯ ಸತೀಶ್ ಶೆಟ್ಟಿ ಕುಬಣೂರು ಅವರ ನಿವಾಸದಲ್ಲಿ ಜರಗಿತು. ಶಿಬಿರವನ್ನು ಎನ್.ಟಿ.ಯು. ರಾಜ್ಯ ಕಾರ್ಯದರ್ಶಿ ಎ.ವಿ. ಹರೀಶ್ ದಿಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷ ಕೃಷ್ಣನ್ ಟಿ. ವಹಿಸಿದ್ದರು. ಮಂಗಲ್ಪಾಡಿ ಗ್ರಾಮ ಪಂಚಾಯಖಿI ಸದಸ್ಯ, ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ರೈ ಮುಖ್ಯ ಅತಿಥಿಯಾಗಿದ್ದರು. 2025-26 ನೇ ಸಾಲಿನ ಸದಸ್ಯತ್ವ ಅಭಿಯಾನಕ್ಕೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.
ಎನ್.ಟಿ.ಯು. ಕೇರಳ ರಾಜ್ಯ ಸಮಿತಿ ಸದಸ್ಯ ರಂಜಿತ್, ಹೊಸದುರ್ಗ ಕಡಪ್ಪುರ ಶಾಲೆಯ ಅಧ್ಯಾಪಕ ಮನೋಜ್ ಅವರಿಗೆ ಸದಸ್ಯತನ ನೀಡುವುದರೊಂದಿಗೆ ಅಭಿಯಾನಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಅಧ್ಯಾಪಕರನ್ನು ಗೌರವಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಹಾಗೂ ಕೋಶಾಧಿಕಾರಿ ಮಹಾಬಲ ಭಟ್ ಉಪಸ್ಥಿತರಿದ್ದರು.
ಬಳಿಕ ಜರಗಿದ ಸಂಘಟನಾ ಚರ್ಚಾ ಅವಧಿಯಲ್ಲಿ ಸಂಘಟನೆಯ ಬಲವರ್ಧನೆಯಲ್ಲಿಕಾರ್ಯಕರ್ತರು ನಿರ್ವಹಿಸಬೇಕಾದ ಜವಾಬ್ದಾರಿಗಳು, ರಾಷ್ಟ್ರೀಯತೆ ಹಾಗೂ ತತ್ವಾಧಾರಿತವಾಗಿ ಸಂಘಟನೆಯನ್ನು ಬಲಪಡಿಸಬೇಕಾದ ಅನಿವಾರ್ಯತೆಯ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಣ್ಣೂರು ವಿಭಾಗ ಕಾರ್ಯವಾಹ ಲೋಕೇಶ್ ಜೋಡುಕಲ್ಲು ಮಾರ್ಗದರ್ಶನ ನೀಡಿದರು. ಎನ್.ಟಿ.ಯು. ವನಿತಾ ವಿಂಗ್ ರಾಜ್ಯ ನೇತಾರೆ ಸುಚಿತಾ ಟೀಚರ್, ಕುಂಬಳೆ ಉಪ ಜಿಲ್ಲಾಧ್ಯಕ್ಷ ದಿನೇಶ್, ಮಂಜೇಶ್ವರ ಉಪ ಜಿಲ್ಲಾಧ್ಯಕ್ಷೆ ಚಂದ್ರಿಕಾ ಟೀಚರ್ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎನ್.ಟಿ.ಯು. ರಾಜ್ಯ ಸಮಿತಿ ಸದಸ್ಯ ಅರವಿಂದಾಕ್ಷ ಭಂಡಾರಿ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ, ಪ್ರಭಾಕರನ್ ನಾಯರ್ ಸಮಾರೋಪ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ2025-26 ನೇ ಸಾಲಿನ ವಾರ್ಷಿಕ ಯೋಜನೆ ಸದಸ್ಯತ್ವ ಗುರಿ ಸಹಿತ ಉಪಜಿಲ್ಲಾ ಮಟ್ಟದ ವಿಸ್ಕøತ ವರದಿಯನ್ನು ಮಂಡಿಸಲಾಯಿತು. ಮಂಜೇಶ್ವರ ಉಪಜಿಲ್ಲಾ ಕಾರ್ಯದರ್ಶಿ ದೇವಿಪ್ರಸಾದ್ ಸ್ವಾಗತಿಸಿ, ಕಾಸರಗೋಡು ಉಪಜಿಲ್ಲಾಧ್ಯಕ್ಷ ಪ್ರದೀಪ್ ವಂದಿಸಿದರು. ಈಶ್ವರ್ ಕಿದೂರು ನಿರೂಪಿಸಿದರು.




.jpg)
.jpg)
.jpg)
.jpg)
