ಕಾಸರಗೋಡು: ಪಾಲಕುನ್ನು ಎರೋಳ್ ಮೊಟ್ಟಮ್ಮಾಳ್ ಪಶ್ಚಿಮ ಮನೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪುನ: ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಅದ್ದೂರಿಯಾಗಿ ನೆರವೇರಿತು. ಬೆಳಗ್ಗೆ ಗಣಪತಿ ಹೋಮ, ಕಲಶ ಪ್ರತಿಷ್ಠೆ, ಕಲಹೋಮ, ಪೂರ್ಣಾಹುತಿ, ವಿಷ್ಣು ಮೂರ್ತಿಪುನಃ ಪ್ರತಿಷ್ಠಾಪನಾ ಸಮಾರಂಭದ ನಂತರ ನೈವೇದ್ಯ ನಿರ್ಣಯ, ಪೂಜೆ, ಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಿತು.
ನಂತರ ಚಂದ್ರಾಪುರಂ ಅಯ್ಯಪ್ಪ ಭಜನಾ ಮಂದಿರ ಭಜನಾ ಸಮಿತಿ, ನಟ್ಟಕಲ್ ಮಿತ್ರ ಭಜನಾ ಸಮಿತಿ, ನೆಲ್ಲಿತ್ತಿಕಂ ಶಾರದಾಂಬಾ ಭಜನಾ ಸಮಿತಿಯಿಂದ ಭಜನೆ ನಡೆಯಿತು. ಶ್ರೀ ವಿಷ್ಣುಮೂರ್ತಿ ದೈವದ ಮಹೋತ್ಸವ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಸಾಂಸ್ಕøತಿಕ ವೈವಿಧ್ಯ, ಕಲಾ ಕಾರ್ಯಕ್ರಮ ನೆರವೇರಿತು.





