ಕಾಸರಗೋಡು: ನೇತ್ರ ಚಿಕಿತ್ಸೆ ಉಚಿತ ಶಿಬಿರ ಮೇ 5ರಂದು ಕಾಸರಗೋಡು ತಾಳಿಪಡ್ಪು ಹೋಟೆಲ್ ಉಡುಪಿ ಗಾರ್ಡನ್‍ನ ಮಥುರಾ ಸಭಾಂಗಣದಲ್ಲಿ ನಡೆಯಲಿದೆ. ಹೋಟೆಲ್ ಉಡುಪಿ ಗಾರ್ಡನ್, ಪ್ರಸಾದ್ ನೇತ್ರಾಲಯ ಕಾಸರಗೋಡು, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಕಾಸರಗೋಡು ನಗರಸಭೆಯ 4,5 ಮತ್ತು 33ನೇ ವಾರ್ಡ್ ಸದಸ್ಯರು, ಕೇರಳ ಹೋಟೆಲ್ ಮತ್ತು ರೆಸ್ಟಾರೆಂಟ್ ಅಸೊಸಿಯೇಶನ್ ಜಿಲ್ಲಾ ಸಮಿತಿ ಜಂಟಿ ವತಿಯಿಂದ ಈ ಶಿಬಿರ ಜರುಗಲಿದೆ.
ಅಂದು ಬೆಳಗ್ಗೆ 10ರಿಂದ ತಪಾಸಣೆ ಆರಂಭಗೊಳ್ಳಲಿದೆ. ಈ ಶಿಬಿರದಲ್ಲಿ ಭಾಗವಹಿಸುವವರಿಗೆ ರಿಯಾತಿ ದರದಲ್ಲಿ ಶಸ್ತ್ರಚಿಕಿತ್ಸೆ ಮತ್ತು ಕನ್ನಡಕ ವಿತರಣೆಯ ಸೌಲಭ್ಯವಿರುವುದು. ಅರ್ಹ ವ್ಯಕ್ತಿಗಳಿಗೆ ಹೋಟೆಲ್ ಉಡುಪಿ ಗಾರ್ಡನ್ ವತಿಯಿಂದ ಉಚಿತ ಕನ್ನಡಕ ವಿತರಣೆ ನಡೆಯಲಿದೆ. ಬೆಳಗ್ಗೆ 9.30ಕ್ಕೆ ನಡೆಯುವ ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ಅಬ್ಬಾಸ್ ಬೀಗಂ ಶಿಬಿರ ಉದ್ಘಾಟಿಸುವರು. ಹೋಟೆಲ್ ಉಡುಪಿ ಗಾರ್ಡನ್ ಮಾಲೀಕ ರಾಮಪ್ರಸಾದ್ ಕಾಸರಗೋಡು ಅಧ್ಯಕ್ಷತೆ ವಹಿಸುವರು. ಹೋಟೆಲ್ ಮತ್ತು ರೆಸ್ಟಾರೆಂಟ್ ಅಸೊಸಿಯೇಶನ್ ಜಿಲ್ಲಾ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಕಾರ್ಯದರ್ಶಿ ಬಿಜು ಚುಳ್ಳಿಕ್ಕರೆ, ಪ್ರಸಾದ್ ನೇತ್ರಾಲಯದ ಹಿರಿಯ ನೇತ್ರ ತಜ್ಞೆ ಡಾ.ವೃಂದಾ ವಿವನಾಥನ್, ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವಾರ್ಡ್ ಸದಸ್ಯೆಯರಾದ ಅಶ್ವಿನಿ ನಾಯಕ್, ಹೇಮಲತಾ, ವೀಣಾ ಅರುಣ್ ಉಪಸ್ಥಿತರಿರುವರು.




