ಕಾಸರಗೋಡು: ಕನ್ನಡ ಭವನ ಕಾಸರಗೋಡು ಪ್ರಕಾಶನಗೊಳಿಸಿದ 7ಕೃತಿಗಳನ್ನು ವಿಶ್ವ ರಾಮಕ್ಷತ್ರಿಯ ಮಹಾಸಂಘಕ್ಕೆ ಹಸ್ತಾಂತರಿಸಲಾಯಿತು. ಮಂಗಳೂರಿನ ಜೆಪ್ಪುರಾಮಕ್ಷತ್ರಿಯ ಮಂದಿರದಲ್ಲಿ ನಡೆದ ವಿಶ್ವ ರಾಮಕ್ಷತ್ರಿಯ ಮಹಾಸಂಘದ ತ್ರೈ ಮಾಸಿಕ ಸಭೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಘದ ಅಧ್ಯಕ್ಷ ಶಶಿಧರ್ ನಾಯ್ಕ್ ಇವರೀಗೆ ಕನ್ನಡ ಭವನ ಪ್ರಕಾಶನದ ಸಂಚಾಲಕ ವಾಮನ್ ರಾವ್ ಬೇಕಲ್ ಕೃತಿಗಳನ್ನು ನೀಡಿದರು. ಕಾಸರಗೋದಿನ ಚಂಚಲಾಕ್ಷಿ ಶಾಮ್ ಪ್ರಕಾಶ್ ಇವರು ಬರೆದ "ಮತ್ತೆ ಚಿಗುರಿದ ಭಾವ "ಹಾಗೂ ಕಾಸರಗೋಡಿನ ಕವಯತ್ರಿ ಮೇಘಾ ಶಿವರಾಜ್ ಬರೆದ "ಮೌನ ಮಾತಾದಾಗ "ಕವನ ಸಂಕಲನ ಸೇರಿದಂತೆ ಏಳು ಕೃತಿಗಳನ್ನು ನೀಡಲಾಯಿತು.





