ಕಾಸರಗೋಡು: ಅಖಿಲ ಕೇರಳ ವಾಹನ ಚಾಲನಾ ತರಬೇತಿ ಶಾಲಾ ಕಾರ್ಮಿಕರ ಸಂಘ (ಎಕೆಡಿಎಸ್‍ಯು) ವತಿಯಿಂದ ವಿವಿಧ ಬೇಡಿಕೆ ಮುಂದಿರಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.
ವಾಹನ ಚಾಲನಾ ತರಬೇತಿ ಶಾಲಾ ಕಾರ್ಮಿಕರ ವಿರುದ್ಧ ಸಾರಿಗೆ ಸಚಿವರು ತೋರುತ್ತಿರುವ ಕಾರ್ಮಿಕ ವಿರೋಧಿ ಧೋರಣೆ ಕೊನೆಗೊಳಿಸಬೇಕು, ಸರ್ಕಾರ ವಾಹನ ಚಾಲನಾ ತರಬೇತಿ ಶಾಲೆಯನ್ನು ಸಂರಕ್ಷಿಸಬೇಕು, ಕೆಎಸ್‍ಆರ್‍ಟಿಸಿ ವಾಹನ ಚಾಲನಾ ತರಬೇತಿ ಶಾಲೆಯಲ್ಲಿ ಕಲಿತ ಚಾಲಕರಿಗೆ ಆರ್‍ಟಿಒ ನಿರ್ಧರಿಸಿದ ವಾಹನ ಚಾಲನಾ ಪರೀಕ್ಷಾ ಮೈದಾನದಲ್ಲಿ ಪರೀಕ್ಷೆಗೆ ಹಾಜರಾಗುವಂತೆ ಮಾಡಬೇಕು, ಅಸ್ತಿತ್ವದಲ್ಲಿರುವ ಚಾಲನಾ ತರಬೇತಿ ಶಾಲಾ ಸಿಬ್ಬಂದಿಯನ್ನು ಅಣಕಿಸುವ ರೀತಿಯಲ್ಲಿ ಸಾರಿಗೆ ಸಚಿವರು ನಡೆಸುವ ಪತ್ರಿಕಾಗೋಷ್ಠಿಯನ್ನು ಕೊನೆಗೊಳಿಸಬೇಕು ಎಂಬ ಬೇಡಿಕೆ ಮುಂದಿರಿಸಿ ಧರಣಿ ಆಯೋಜಿಸಲಾಗಿತ್ತು.
ಸಿಐಟಿಯು ಜಿಲ್ಲಾ ಸಮಿತಿ ವತಿಯಿಂದ ಧರಣಿ ನಡೆಸಿತು. ಸಿಐಟಿಯು ಜಿಲ್ಲಾ ಸಮಿತಿ ಕಾರ್ಯದರ್ಶಿ ಗಿರಿಕೃಷ್ಣನ್ ಉದ್ಘಾಟಿಸಿದರು. ಅಖಿಲ ಕೇರಳ ವಾಹನ ಚಾಲನಾ ತರಬೇತಿ ಶಾಲಾ ಕಾರ್ಮಿಕರ ಒಕ್ಕೂಟ (ಸಿಐಟಿಯು) ಜಿಲ್ಲಾಧ್ಯಕ್ಷ ಪಿ.ವಿ. ಶ್ರೀಜಿತ್ ಅಧ್ಯಕ್ಷತೆ ವಹಿಸಿದ್ದರು ಮುಖಂಡರಾದ ಬಿ. ಸುರೇಶ್, ವಿ.ಕೆ. ಸ್ಮಿತಾ, ಮತ್ತು ಟಿ.ಕೆ. ವಿನೋದ್ ªಉಪಸ್ಥಿತರಿದ್ದರು. ಆಲ್ ಕೇರಳ ಡ್ರೈವಿಂಗ್ ಸ್ಕೂಲ್ ವರ್ಕರ್ಸ್ ಯೂನಿಯನ್ (ಸಿಐಟಿಯು) ಜಿಲ್ಲಾ ಕಾರ್ಯದರ್ಶಿ ಎಚ್.ಗುರುಪ್ರಸಾದ್ ಸ್ವಾಗತಿಸಿದರು. ಜಿಲ್ಲಾ ಸಮಿತಿ ಕೋಶಾಧಿಕಾರಿ ಆರ್.ಆರ್.ಮನೋಹರ್ ವಂದಿಸಿದರು.


