ಕಾಸರಗೋಡು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಾಸರಗೋಡು ನಗರಸಭಾ ಕಾಂಡಿಜೆಂಟ್ ಎಂಪ್ಲೋಯೀಸ್ ಕಾಂಗ್ರೆಸ್(ಐಎನ್‍ಟಿಯುಸಿ)ವತಿಯಿಂದ ಕಾಸರಗೋಡು ನಗರಸಭಾ ಕಚೇರಿ ಎದುರು ವಂಚನಾ ದಿನವನ್ನು ಆಚರಿಸಲಾಯಿತು.
ನಗರಸಭೆಯ ತಾತ್ಕಾಲಿಕ ನೌಕರರನ್ನು ಸಾರ್ವಜನಿಕ ಸೇವೆಗೆ ಸೇರಿಸಬೇಕು, ಸಹಭಾಗಿತ್ವದ ಪಿಂಚಣಿ ವ್ಯವಸ್ಥೆ ಕೈಬಿಡಬೇಕು, ವೇತನ ಪರಿಷ್ಕರಣೆ ಖಚಿತಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಮುಂದಿರಿಸಿ ಪ್ರತಿಭಟನೆ ಆಯೋಜಿಸಲಾಗಿತ್ತು. ಪ್ರತಿಭಟನಾ ಧರಣಿಯನ್ನು ಕೆಎಂಸಿಇಸಿ ಜಿಲ್ಲಾಧ್ಯಕ್ಷ ಮತ್ತು ಐಎನ್‍ಟಿಯುಸಿ ಜಿಲ್ಲಾ ಉಪಾಧ್ಯಕ್ಷ ಅರ್ಜುನನ್ ತಾಯಲಂಗಾಡಿ ಉದ್ಘಾಟಿಸಿದರು. ಕೇರಳ ಮುನ್ಸಿಪಲ್ ಕಾಂಡಿಜೆಂಟ್ ಎಂಪ್ಲೋಯೀಸ್ ಕಾಂಗ್ರೆಸ್(ಕೆಎಂಸಿಇಸಿ)ರಾಜ್ಯ ಸಮಿತಿ ಕಾರ್ಯದರ್ಶಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಘಟಕದ ಕಾರ್ಯದರ್ಶಿ ಪುರುಷೋತ್ತಮನ್ ಮುದಲಪ್ಪಾರ, ಕೋಶಾಧಿಕಾರಿ ಸತೀಶನ್, ಉಪಾಧ್ಯಕ್ಷರಾದ ಸಂತೋಷ್, ರವೀಂದ್ರನ್ ಮೊದಲಾದವರು ಉಪಸ್ಥೀತರಿದ್ದರು.


