ಕಾಸರಗೋಡು: ಕಾಶ್ಮೀರದ ಪಹಲ್ಗಾಮ್‍ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ನಡೆಸಿರುವ ದಾಳಿ ಖಂಡಿಸಿ ಎನ್.ಸಿ.ಪಿ.ಎಸ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕಾಞಂಗಾಡಿನಲ್ಲಿಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ರಾಮಚಂದ್ರನ್ ಎಂಬ ಮಲಯಾಳಿ ಸೇರಿದಂತೆ 27 ಮಂದಿ ಪ್ರವಾಸಿಗರನ್ನು ಬರ್ಬರವಾಗಿ ಕೊಲೆಮಾಡಿರುವ ಪ್ರಕರಣ ದೇಶದ ಜನತೆಯನ್ನು ಕಣ್ಣೀರಿನಲ್ಲಿ ತೋಯುವಂತೆ ಮಾಡಿದೆ. ಭಯೋತ್ಪಾದಕ ದಾಳಿ ಖಂಡಿಸಿ ಎನ್‍ಸಿಪಿ ಕಾಸರಗೋಡು ಜಿಲ್ಲಾ ಸಮಿತಿ ಪ್ರತಿಭಟನಾ ರ್ಯಾಲಿ ಆಯೋಜಿಸಿದ್ದು, ಹತ್ಯಾಕಾಂಡದಲ್ಲಿ ಜೀವ ಕಳೆದುಕೊಂಡವರಿಗೆ ಸಭೆ ಗೌರವ ಸಲ್ಲಿಸಿತು. ಎನ್‍ಸಿಪಿ ರಾಜ್ಯ ಸಮಿತಿಯ ಆಹ್ವಾನದನ್ವಯ ಕಾಞಂಗಾಡ್ ಹುತಾತ್ಮರ ಸ್ಮಾರಕ ಮಂಟಪದ ಬಳಿ ಪ್ರತಿಭಟನೆ ಆಯೋಜಿಸಲಾಗಿತ್ತು.
ಪಕ್ಷದ ಕಾಸರಗೋಡು ಜಿಲ್ಲಾಧ್ಯಕ್ಷ ಕರೀಂ ಚಂದೇರ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕೋಶಾಧಿಕಾರಿ ಬೆನ್ನಿ ನಾಗಮಟ್ಟಮ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಸಿ.ಬಾಲನ್ ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಕಾರ್ಯದರ್ಶಿಗಳಾದ ಉದಿನೂರು ಸುಕುಮಾರನ್ ಮತ್ತು ಸಿದ್ದಿಕ್ ಕೈಕಂಬ, ಜಿಲ್ಲಾ ಉಪಾಧ್ಯಕ್ಷ ರಾಜು ಕಾಯೋನ್, ಮತ್ತು ಎನ್‍ಸಿಪಿಎಸ್ ಜಿಲ್ಲಾ ಕಾರ್ಯದರ್ಶಿ ರಮ್ಯಾ ರಾಜೇಶ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಓ.ಕೆ. ಬಾಲಕೃಷ್ಣನ್ ಸ್ವಾಗತಿಸಿದರು. ಲಿಜೋ ಸೆಬಾಸ್ಟಿಯನ್ ವಂದಿಸಿದರು. ಪದಾಧಿಕಾರಿಗಳಾದ ಮೋಹನನ್ ಚುನ್ನಂಕುಲಂ, ರಾಜೇಶ್ ಕಾಞಂಗಾಡ್, ಹಮೀದ್ ಚೇರಂಗೈ, ಎಂ.ಟಿ.ಪಿ. ಹ್ಯಾರಿಸ್, ನಾಸರ್ ಪಲ್ಲಂ ಪ್ರತಿಭಟನೆ ನೇತೃತ್ವ ವಹಿಸಿದ್ದರು.





