ಕಾಸರಗೋಡು: ಎಲ್ಲ ಜನರ ಸಹಕಾರದ ಫಲವಾಗಿ ಪರಪ್ಪ ಬ್ಲಾಕ್ ಪಂಚಾಯಿತಿ 2024ನೇ ಸಾಲಿನ ಪ್ರಧಾನ ಮಂತ್ರಿಗಳ ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಿರುವ ಪ್ರಶಸ್ತಿಯನ್ನು ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಹೇಳಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪರಪ್ಪ ಬ್ಲಾಕ್ ಪಂಚಾಯಿತಿಯ ಸಾರ್ವಜನಿಕ ಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಸನ್ಮಾನಿಸುವ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಮಾತನಾಡಿದರು.
ಆರೋಗ್ಯ ಮತ್ತು ಪೆÇೀಷಣೆ, ಶಿಕ್ಷಣ, ಮೂಲಭೂತ ಮತ್ತು ಸಾಮಾಜಿಕ ಸೌಲಭ್ಯಗಳು, ಕೃಷಿ, ಇತ್ಯಾದಿ ದತ್ತಾಂಶ ಸಂಗ್ರಹಣೆಯ ವಿಶೇಷ ಕಾರ್ಯಗಳಲ್ಲಿ ನಡೆಸಿದ ಸಾಧನೆ ಪರಪ್ಪ ಬ್ಲಾಕನ್ನು ಪ್ರಶಸ್ತಿಯೆಡೆಗೆ ಕೊಂಡೊಯ್ದಿದೆ. ಪರಪ್ಪ ಬ್ಲಾಕ್ ಪಂಚಾಯತ್ ವ್ಯಾಪ್ತಿಯಲ್ಲಿನ ಈಸ್ಟ್ ಎಳೇರಿ, ಕಲ್ಲಾರ್, ಕಿನನೂರು ಕರಿಂತಲಂ, ಬೇಲೂರು, ಕೋಡೋಂ ಬೇಲೂರು, ವೆಸ್ಟ್ ಎಳೇರಿ ಮತ್ತು ಪನತ್ತಡಿ ಗ್ರಾಮ ಪಂಚಾಯಿತಿ ಆಡಳಿತ ಸಮಿತಿ, ಈ ಪಂಚಾಯಿತಿ ವ್ಯಪ್ತಿಯಲ್ಲಿ ಬರುವ ಆಶಾ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕರು, ವೈದ್ಯರು, ಕೃಷಿ ಅಧಿಕಾರಿಗಳು ಮತ್ತು ಬುಡಕಟ್ಟು ಜನಾಂಗದವರು ಈ ಸಾಧನೆಗೆ ಪರೋಕ್ಷ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಕೆ. ಇನ್ಬಶೇಖರ್ ಅವರು ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ. ಲಕ್ಷ್ಮಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಹಸ್ತಾಂತರಿಸಿದರು. ಆಸ್ಪಿರೇಷನ್ ಬ್ಲಾಕ್ ಕಾರ್ಯಕ್ರಮದಲ್ಲಿ ಸಹಾಯ ಮಾಡಿದ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬ್ಲಾಕ್ ಪಂಚಾಯತ್‍ನ ಪಂಚಾಯತ್ ಅಧ್ಯಕ್ಷರಿಗೆ ಪ್ರಶಂಸಾ ಪತ್ರವನ್ನು ನೀಡಲಾಯಿತು.
ಕೃಷಿ ಇಲಾಖೆ, ಪಶುಸಂಗೋಪನೆ, ಬುಡಕಟ್ಟು ಇಲಾಖೆ, ಕುಟುಂಬಶ್ರೀ, ಶಿಕ್ಷಣ, ಕೇರಳ ಜಲ ಪ್ರಾಧಿಕಾರ, ಐಟಿ ಮಿಷನ್, ಪರಪ್ಪ ಬ್ಲಾಕ್ ಪಂಚಾಯತ್ ಆಡಳಿತ ಸಮಿತಿ ಮತ್ತು ಜಿಲ್ಲಾ ಯೋಜನಾ ಕಚೇರಿ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಸನ್ಮಾನಿಸಿದರು.





