ಕಾಸರಗೋಡು: ನಗರಸಭಾ ಕಚೇರಿಯಲ್ಲಿ ಕಳೆದ 34 ವರ್ಷಗಳ ಕಾಲ ಸೇವೆಯ ನಂತರ ನಿವೃತ್ತರಾಗುತ್ತಿರುವ ಸಿ. ಕೃಷ್ಣನ್ ಅವರಿಗೆ ಕೇರಳ ನಗರಸಭಾ ಕಾರ್ಮಿಕರ ಕಾಂಟಿಜೆಂಟ್ ನೌಕರರ ಕಾಂಗ್ರೆಸ್ ವತಿಯಿಂದ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಯಿತು.
ನಗರಸಬ ವನಿತಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಅರ್ಜುನನ್ ತಾಯಲಂಗಡಿ ಉದ್ಘಾಟಿಸಿದರು. ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಬಾಲಕೃಷ್ಣನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪುರುಷೋತ್ತಮನ್ ಮುದಲಪ್ಪಾರ, ಕೆಎಲ್‍ಜಿಎಸ್‍ಎ ಘಟಕದ ಅಧ್ಯಕ್ಷ ಸಂತೋಷ್, ಪೀತಾಂಬರನ್, ಅಬೂಬಕರ್, ಸತೀಶನ್, ಶೋಭಾ, ಕಮಲಾಕ್ಷನ್, ಸಂತೋಷ್, ಹಮೀದ್, ರವೀಂದ್ರನ್, ವಿನಯ, ಹೇಮಲತಾ, ಅರವಿಂದನ್ ಮೊದಲಾದವರು ಉಪಸ್ಥಿತರಿದ್ದರು. ಕೃಷ್ಣನ್ ವಂದಿಸಿದರು.





