ಕಾಸರಗೋಡು : ಕಾಞಂಗಾಡು ಚಂದ್ರಗಿರಿ ರಸ್ತೆಯಲ್ಲಿ ತ್ರಿಕ್ಕನ್ನಾಡು ಸಮೀಪ ಕಾರಿನಲ್ಲಿ ಸಾಗಿಸುತ್ತಿದ್ದ 1.175ಕೋಟಿ ರೂ. ಕಾಳಧನ ವಶಪಡಿಸಿಕೊಂಡ ಪ್ರಕರಣವನ್ನು ಜಾರಿ ನಿರ್ದೇಶನಾಲಯ(ಇ.ಡಿ)ಮತ್ತು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಮೇಲ್ಪರಂಬ ನಿವಾಸಿ ಅಬ್ದುಲ್ ಖಾದರ್ ಎಂ.ಎಸ್ ಎಂಬಾತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. ಅಬ್ದುಲ್ ಖಾದರ್ ಕಾಯಂ ಆಗಿ ಕಾಳಧನ ಸಾಗಿಸುತ್ತಿರುವ ವ್ಯಕ್ತಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೆÇೀಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯಭಾರತ್ ರೆಡ್ಡಿ ಅವರ ನಿರ್ದೇಶನದ ಮೇರೆಗೆ ಬೇಕಲ ಠಾಣೆ ಪೊಲೀಸರು ವಾಹನ ತಪಾಸಣೆ ನಡೆಸುವ ಮಧ್ಯೆ ಕಾರಿನ ಸೀಟಿನ ತಳಭಾಗದಲ್ಲಿ ಪ್ರತ್ಯೇಕವಾಗಿ ನಿರ್ಮಿಸಲಾಗಿದ್ದ ಕೋಶದಲ್ಲಿ ದಾಸ್ತಾನಿರಿಸಿದ್ದ 1.17ಕೋಟಿ ರೂ. ನಗದು ಪಡಿಸಲಾಗಿತ್ತು. ಬೇಕಲ ಡಿವೈಎಸ್‍ಪಿ ವಿ.ವಿ ಮನೋಜ್, ಬೇಕಲ ಎಎಸ್‍ಪಿ ಡಾ.ಜಿ. ಅಪರ್ಣಾ ಐಪಿಎಸ್, ಇನ್ಸ್‍ಪೆಕ್ಟರ್ ಕೆ. ಎ. ಶೈನ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತ್ತು.




