ಉಪ್ಪಳ : ರಾಷ್ಟ್ರೀಯ ಹೆದ್ದಾರಿ ಉಪ್ಪಳ ಸನಿಹದ ಉಪ್ಪಳ ಗೇಟ್ ಬಳಿ ಆಟೋರಿಕ್ಷಾ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಆಟೋ ಚಾಲಕ, ಕಾಞಂಗಾಡು ನಿವಾಸಿ ಮೋಹನನ್ ಮೃತಪಟ್ಟಿದ್ದಾರೆ. ಬುಧವಾರ ಸಂಜೆ ಅಪಘಾತ ನಡೆದಿದ್ದು, ಅಪಘಾತದಿಂದ ಕಾರು ಮತ್ತು ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಆಟೋರಿಕ್ಷಾದೆಡೆಯಲ್ಲಿ ಸಿಲುಕಿದ್ದ ಚಾಲಕ ಮೋಹನನ್ ಅವರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜವಾಗಿರಲಿಲ್ಲ. ಮಂಜೇಶ್ವರ ಠಾಣೆ ಪೊಲೀಸರುಕೇಸು ದಾಖಲಿಸಿಕೊಂಡಿದ್ದಾರೆ.




