ಕುಂಬಳೆ: ಉದ್ಯೋಗ ಅರಸಿ ಕಾಂಬೋಡಿಯಾ ತೆರಳಿರುವ ಬಂದ್ಯೋಡು ಅಡ್ಕ ನಿವಾಸಿ ಮಹಮ್ಮದ್ ಮುನೀರ್(25)ಬಗ್ಗೆ ಮನೆಯವರಿಗೆ ಯಾವುದೇ ಮಾಹಿತಿ ಲಭ್ಯವಗುತ್ತಿಲ್ಲ ಎಂಬ ದೂರಿನ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮಹಮ್ದ್ ಮುನೀರ್ 2022ರಲ್ಲಿ ಉದ್ಯೋಗ ಅರಸಿ ಕಾಂಬೋಡಿಯಾ ತೆರಳಿದ್ದು, ಕಳೆದ ಎರಡು ತಿಂಗಳಿನಿಂದ ಈತನ ಬಗ್ಗೆ ಯಾವುದೇ ಮಾಹಿತಿ ಮನೆಯವರಿಗೆ ಲಭ್ಯವಾಗಿಲ್ಲ. ಅಲ್ಲದೆ ಫೋನ್ ಕರೆಗು ಲಭ್ಯವಾಗುತ್ತಿಲ್ಲ ಎಂಬುದಾಗಿ ಇವರ ಸಹೋದರಿ ಮನ್ಸೀನಾ ನೀಡಿದ ದೂರಿನನ್ವಯ ಕೇಸು ದಾಖಲಾಗಿದೆ.




