ಮುಳ್ಳೇರಿಯ: ಇಲ್ಲಿಯ ಕಯ್ಯಾರ ಕಿಂಞಣ್ಣ ರೈ ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸುವ ಬಾಲವೇದಿಯ ಆಶ್ರಯದಲ್ಲಿ ನಡೆದ ವರ್ಣಕುಟೀರಂ ಕಾರ್ಯಕ್ರಮ ಸಮಾರೋಪಗೊಂಡಿತು. ಸಮಾರೋಪದ ಅಂಗವಾಗಿ ಪುಸ್ತಕ ಚರ್ಚೆ ನಡೆಯಿತು. ಅಭಿರಾಮ್. ಬಿ.ಸಿ. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿಕ್ಷಕಿ ಸಿ.ಕೆ. ಭವ್ಯಶ್ರೀ, ಸಂಶೋಧಕ ಸಂದೀಪ್ ಬಿ, ಮತ್ತು ಕೆ.ಕೆ. ರಂಜಿತ್ ಮಾಸ್ತರ್ ಓದುವ ಟಿಪ್ಪಣಿಗಳು, ದಿನಚರಿ ಮತ್ತು ಪುಸ್ತಕ ಚರ್ಚೆಯನ್ನು ಮೌಲ್ಯಮಾಪನ ಮಾಡಿದರು. ಅದ್ವೈತ್ ಕೆ.ಎಸ್. ಸ್ವಾಗತಿಸಿ, ಅಶ್ವಿನ್ ಎಂ.ಎಸ್. ವಂದಿಸಿದರು.




.jpg)
