ಕಾಸರಗೋಡು: ಪ್ರೀತಿಸುವ ಸೋಗಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿ, ನಂತರ ವಿದೇಶಕ್ಕೆ ಪರಾರಿಯಾಗಿದ್ದ ವೆಸ್ಟ್‍ಎಳೇರಿ ಆಲಕ್ಕೋಡ್ ನಿವಾಸಿ ಜಯಕೃಷ್ಣನ್ ಎಂಬಾತನನ್ನು ವೆಳ್ಳರಿಕುಂಡು ಠಾಣೆ ಪೊಲೀಸರು ಮಂಗಳೂರು ವಿಮಾನ ನಿಲ್ದನದಿಂದ ಬಂಧಿಸಿದ್ದಾರೆ. 2024 ಮಾರ್ಚ್ ತಿಂಗಳಲ್ಲಿ ವೆಳ್ಳರಿಕುಂಡು ಠಾಣೆ ವ್ಯಾಪ್ತಿಯ ಯುವತಿಗೆ ಕಿರುಕುಳ ನೀಡಿರುವುದಲ್ಲದೆ, ಈ ದೃಶ್ಯಾವಳಿಯನ್ನು ಚಿತ್ರೀಕರಿಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದನು. ಅಲ್ಲಿ ನಕಲಿ ಇನ್‍ಸ್ಟಾಗ್ರಾಂ ಐಡಿ ತಯಾರಿಸಿ, ಈ ಮೂಲಕ ದೃಶ್ಯಾವಳಿಯನ್ನು ಯುವತಿಯ ಸ್ನೇಹಿತಗೆ ಕಳುಹಿಸಿಕೊಟ್ಟಿರುವ ಬಗ್ಗೆ ಲಭಿಸಿದ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಆರೋಪಿಗಾಗಿ ವೆಳ್ಳರಿಕುಂಡು ಠಾಣೆ ಪೊಲೀಸರು ಲುಕೌಟ್ ನೋಟೀಸು ಜಾರಿಗೊಳಿಸಿದ್ದರು. ಆರೋಪಿ ವಿದೇಶದಿಂದ ಊರಿಗೆ ವಾಪಸಾಗುವ ಬಗ್ಗೆ ವಿಮಾನ ನಿಲ್ದಾಣ ಅಧಿಕಾರಿಗಳು ನೀಡಿದ ಮಾಹಿತಿಯನ್ವಯ ಪೊಲೀಸರು ಮಂಗಳೂರು ವಿಮಾನ ನಿಲ್ದಾಣದಿಂದ ವಶಕ್ಕೆ ತೆಗೆದುಕೊಂಡಿದ್ದರು.




