ನವದೆಹಲಿ: ಸೇನಾ ರೈಲುಗಳ ಚಲನೆಯ ಬಗ್ಗೆ ಮಾಹಿತಿ ಪಡೆಯಲು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಯತ್ನಿಸುವ ಸಾಧ್ಯತೆಗಳಿದ್ದು, ರೈಲ್ವೆ ನೌಕರರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಮತ್ತು ಗೋಪ್ಯ ಮಾಹಿತಿಗಳನ್ನು ಅನಧಿಕೃತ ವ್ಯಕ್ತಿಗಳ ಜೊತೆ ಹಂಚಿಕೊಳ್ಳಬಾರದು ಎಂದು ರೈಲ್ವೆ ಇಲಾಖೆ ಸೂಚನೆ ನೀಡಿದೆ.
ಈ ಬಗ್ಗೆ ಮಾರ್ಗಸೂಚಿ ಬಿಡುಗಡೆಗೊಳಿಸಿರುವ ಸಚಿವಾಲಯವು, 'ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳಿಂದ ನೌಕರರಿಗೆ ಕರೆ ಬರುವ ಸಾಧ್ಯತೆಗಳಿವೆ. ಮಿಲ್ ರೈಲು(ರೈಲ್ವೆಯ ಸೇನಾ ವಿಭಾಗ) ಅಧಿಕಾರಿಗಳ ಹೊರತಾಗಿ ಬೇರೆಯವರ ಜೊತೆ ಗೋಪ್ಯ ಮಾಹಿತಿಯನ್ನು ಹಂಚಿಕೊಳ್ಳುವುದು ರಾಷ್ಟ್ರೀಯ ಭದ್ರತೆಗೆ ಅಪಾಯ ತಂದೊಡ್ಡುತ್ತದೆ' ಎಂದು ಹೇಳಿದೆ.
ಭಾರತೀಯ ರೈಲ್ವೆಯ ವಿಶೇಷ ವಿಭಾಗ 'ಮಿಲ್ ರೈಲು' ರಕ್ಷಣಾ ಸರಕುಗಳನ್ನು ಸಾಗಿಸಲು ಸಹಾಯ ಮಾಡುತ್ತದೆ.




