ನವದೆಹಲಿ: 'ಭಾರತ ಪಾಲುದಾರರನ್ನು ಹುಡುಕುತ್ತಿದೆ, ಉಪದೇಶಕರನ್ನಲ್ಲ' ಎಂದು ಯುರೋಪ್‌ಗೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಂದೇಶ ನೀಡಿದ್ದಾರೆ.
ಭಾರತದೊಂದಿಗೆ ಗಾಢವಾದ ಸಂಬಂಧಕ್ಕಾಗಿ ಯುರೋಪ್ ಅನ್ಯೋನ್ಯ ಹಿತಾಸಕ್ತಿಯನ್ನು ಪ್ರದರ್ಶಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
'ಆರ್ಕಟಿಕ್ ಸರ್ಕಲ್ ಇಂಡಿಯಾ ಫಾರಂ'ನಲ್ಲಿ ಈ ಕುರಿತು ಮಾತನಾಡಿರುವ ಜೈಶಂಕರ್, 'ಸಂಪನ್ಮೂಲ ಪೂರೈಕದಾರ ಹಾಗೂ ಗ್ರಾಹಕರಾಗಿ ಭಾರತ ಹಾಗೂ ರಷ್ಯಾ ನಡುವೆ ಉತ್ತಮ ಹೊಂದಾಣಿಕೆ ಇದೆ' ಇಂದು ತಿಳಿಸಿದ್ದಾರೆ.
ರಷ್ಯಾವನ್ನು ಒಳಪಡಿಸದೇ ಉಕ್ರೇನ್ ಸಂಘರ್ಷ ಬಗೆಹರಿಸಲು ಪಾಶ್ಚಿಮಾತ್ಯ ದೇಶಗಳು ಯತ್ನಿಸಿರುವುದನ್ನು ಜೈಶಂಕರ್ ಟೀಕಿಸಿದ್ದಾರೆ.
'ರಷ್ಯಾದಂತೆಯೇ ನಾನು ಅಮೆರಿಕದ ವಾಸ್ತಕತೆಯ ಪ್ರತಿಪಾದಕನಾಗಿದ್ದೇನೆ' ಎಂದು ಅವರು ತಿಳಿಸಿದ್ದಾರೆ.
ಐರೋಪ್ಯದಿಂದ ನಿರೀಕ್ಷೆಗಳು ಏನು ಎಂದು ಕೇಳಿದಾಗ, 'ಜಗತ್ತಿನತ್ತ ದೃಷ್ಟಿ ಹಾಯಿಸಿದಾಗ ನಾವು ಪಾಲುದಾರರ ಹುಡುಕಾಟದಲ್ಲಿದ್ದೇವೆ. ಉಪದೇಶಕರನ್ನಲ್ಲ. ಈ ಪೈಕಿ ಕೆಲವರು ಬದಲಾಗಿದ್ದಾರೆ' ಎಂದು ಹೇಳಿದ್ದಾರೆ.
'ಪಾಲುದಾರ ರಾಷ್ಟ್ರಗಳ ನಡುವೆ ಮಧ್ಯೆ ಗ್ರಹಿಕೆ ಇರಬೇಕು, ಜಗತ್ತು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಜ್ಞಾನ ಇರಬೇಕು' ಎಂದು ಹೇಳಿದ್ದಾರೆ.




