ತಿರುವನಂತಪುರಂ: ವನ್ಯಜೀವಿಗಳ ದಾಳಿ ಪ್ರಕರಣಗಳಲ್ಲಿ ಅರಣ್ಯ ಇಲಾಖೆ ನೀಡುವ ಪರಿಹಾರವನ್ನು ಹೆಚ್ಚಿಸಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ. ಅರಣ್ಯ ಇಲಾಖೆ ಪರಿಹಾರ ಮೊತ್ತವನ್ನು ಕಡಿತಗೊಳಿಸಲು ಮುಂದಾಗಿದೆ. ವನ್ಯಜೀವಿಗಳ ದಾಳಿಯಿಂದ ಪ್ರಾಣ ಕಳೆದುಕೊಳ್ಳುವ ಕುಟುಂಬದ ಸದಸ್ಯರಲ್ಲಿ ಒಬ್ಬರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಲಾಗಿದ್ದರೂ, ಇದುವರೆಗೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.
ಮಾರ್ಚ್ 7, 2024 ರಂದು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಾನವ-ವನ್ಯಜೀವಿ ಸಂಘರ್ಷವನ್ನು ವಿಶೇಷ ರಾಜ್ಯ ವಿಪತ್ತು ಎಂದು ಘೋಷಿಸುವ ಆದೇಶವನ್ನು ಹೊರಡಿಸಿತ್ತು. ಆದೇಶಕ್ಕೆ ಸಂಬಂಧಿಸಿದಂತೆ ಮಾನದಂಡಗಳು, ಮಾರ್ಗಸೂಚಿಗಳು ಮತ್ತು ಎಸ್.ಒ.ಪಿ. ಗಳನ್ನು ಪ್ರಕಟಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.
ಒಂದು ವರ್ಷದಿಂದ ಈ ಆದೇಶದ ಮೇಲೆ ಕ್ರಮ ಕೈಗೊಳ್ಳದ ಸರ್ಕಾರ, ಮೇ 9 ರಂದು ಮಾನದಂಡಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಿತು. ಈಗ ಬಿಡುಗಡೆ ಮಾಡಿರುವ ಆದೇಶವು ಸರ್ಕಾರದ ಆದೇಶಕ್ಕಾಗಿ ಕಾತರದಿಂದ ಕಾಯುತ್ತಿದ್ದ ಗುಡ್ಡಗಾಡು ರೈತರು, ಬುಡಕಟ್ಟು ಜನಾಂಗದವರು ಮತ್ತು ಸಾಮಾನ್ಯ ಜನರಿಗೆ ಮಾಡಿದ ವಂಚನೆಯಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಸಾವಿಗೆ ಪ್ರಮುಖ ಕಾರಣವಾಗಿರುವ ಹಾವು ಕಡಿತದ ಸಾವುಗಳಿಗೆ ಅರಣ್ಯ ಇಲಾಖೆ ಇನ್ನು ಮುಂದೆ ಯಾವುದೇ ಆರ್ಥಿಕ ನೆರವು ನೀಡುವುದಿಲ್ಲ. ಬದಲಾಗಿ, ವಿಪತ್ತು ಪರಿಹಾರ ನಿಧಿಯಿಂದ ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸುವ ಮೂಲಕ ಕ್ರಮವನ್ನು ಕೊನೆಗೊಳಿಸಲಾಗುತ್ತದೆ.
ಹೊಸ ಆದೇಶದ ಮೂಲಕ ಅರಣ್ಯ ಇಲಾಖೆ ಪರಿಹಾರವನ್ನು ಹೆಚ್ಚಿಸದೆ ವಿಪತ್ತು ನಿರ್ವಹಣಾ ನಿಧಿಯಿಂದ ಒಂದು ಭಾಗವನ್ನು ಹಂಚಿಕೆ ಮಾಡಿ ಕೇಂದ್ರ ಪ್ರಾಯೋಜಿತ ನಿಧಿಯಿಂದ ಪರಿಹಾರ ಮೊತ್ತವನ್ನು ಖರ್ಚು ಮಾಡಲು ಹೆಜ್ಜೆ ಇಟ್ಟಿದೆ ಎಂಬ ಆರೋಪ ಕೇಳಿಬರುತ್ತಿದೆ.
ಅರಣ್ಯ ಇಲಾಖೆ ಪರಿಹಾರ ಮೊತ್ತದಲ್ಲಿ ತನ್ನ ಪಾಲನ್ನು ಕಡಿಮೆ ಮಾಡುವ ಆದೇಶವನ್ನು ಹಿಂಪಡೆಯಬೇಕು. ಅರಣ್ಯ ಇಲಾಖೆಯ ಹಂಚಿಕೆಯೊಂದಿಗೆ ವಿಪತ್ತು ಪರಿಹಾರ ನಿಧಿಯನ್ನು ಒಳಗೊಂಡ ಪರಿಷ್ಕøತ ಮೊತ್ತ ನೀಡಬೇಕು ಎಂಬಿತ್ಯಾದಿ ಬೇಡಿಕೆ ಇದೆ.




.jpg)
.jpg)
