HEALTH TIPS

ನೀವು ಅಡುಗೆ ಮಾಡುವಾಗ ಈ ತಪ್ಪು ಮಾಡಬೇಡಿ.! ಇದು ಹಾನಿಗೆ ದಾರಿ!

 ಭಾರತೀಯ ಸಂಪ್ರದಾಯದಲ್ಲಿ ಅಡುಗೆ ಕೂಡ ಬಹಳ ಮುಖ್ಯ ಅಂಶ. ಎಲ್ಲರ ಮನೆಯಲ್ಲೂ ಅಡುಗೆ ಎಂಬುದು ದೊಡ್ಡ ವಿಷಯ. ಮೂರು ಹೊತ್ತು ಬಗೆ ಬಗೆಯ ಖಾದಗಳ ಸವಿಯುವುದು, ವಿಶೇಷ ಪಾಕವಿಧಾನ, ರುಚಿ ರುಚಿಯ ತಿನಿಸುಗಳು ಭಾರತದ ವಿಶೇಷ. ಹಾಗೆ ಎಲ್ಲರ ಮನೆಯಲ್ಲೂ ಬೇರೆ ಬೇರೆ ವಿಧಾನದಲ್ಲಿ, ಬೇರೆ ಬೇರೆ ಶೈಲಿಯ ಅಡುಗೆ ನಾವು ನೋಡಬಹುದು. ಇನ್ನು ಆಹಾರ ನಮ್ಮ ದೈನಂದಿನ ಕೆಲಸ ಕಾರ್ಯಕ್ಕೆ, ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ ಅಂಶ.


ಆಹಾರ ಎಷ್ಟು ಪೌಷ್ಟಿಕವಾಗಿ ಕೂಡಿರಲಿದೆ ಎಂಬುದರ ಮೇಲೆ ಹಾಗೆ ಅದರಲ್ಲಿ ಎಷ್ಟು ಆರೋಗ್ಯಕರ ಅಂಶಗಳು ಸೇರಿವೆ ಎಂಬುದರ ಮೇಲೆ ಗುಣಮಟ್ಟ ಅಳೆಯಬಹುದು. ಅಡುಗೆ ಮಾಡುವಾಗ ಪೋಷಕಾಂಶಗಳ ಮೇಲೆಯೂ ನಾವು ಗಮನವಿಡಬೇಕಾಗುತ್ತದೆ. ಹೀಗಾಗಿ ಹಸಿರು ತರಕಾರಿ, ಬೇಯಿಸಿದ ತರಕಾರಿ, ಹೀಗೆ ಹಲವು ಬಗೆಯ ಅಂಶವನ್ನು ನಮ್ಮ ಆಹಾರದಲ್ಲಿ ಸೇರಿಸುವುದು ಕಾಮನ್.

ಇನ್ನು ನಾವು ನಿತ್ಯ ಮಾಡುತ್ತಿರುವ ಅಡುಗೆ ಎಷ್ಟು ಪೌಷ್ಟಿಕಾಂಶಗಳನ್ನು ಹೊಂದಿರಲಿದೆ ಎಂಬುದು ನಿಮಗೆ ತಿಳಿದಿದ್ಯಾ? ಅಲ್ಲದೆ ನೀವು ನಿತ್ಯ ಆಹಾರ ತಯಾರು ಮಾಡುವಾಗ ಮಾಡುವ ಕೆಲವು ತಪ್ಪುಗಳು ನಿಮ್ಮ ಆಹಾರದಲ್ಲಿ ಪೌಷ್ಟಿಕಾಂಶ ನಷ್ಟವಾಗಲು ಕಾರಣವಾಗುತ್ತಿರಬಹುದು. ಒಂದು ವೇಳೆ ನೀವು ಕೂಡ ಈ ತಪ್ಪುಗಳನ್ನು ಮಾಡುತ್ತಿದ್ದರೆ ಇಂದೇ ಅಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ಮುಖ್ಯ. ಹಾಗಾದ್ರೆ ನೀವು ಆಹಾರ ಬೇಯಿಸುವಾಗ ಮಾಡುತ್ತಿರುವ ತಪ್ಪುಗಳೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ತರಕಾರಿಗಳನ್ನು ಅತಿಯಾಗಿ ಬೇಯಿಸುವುದು

ಸಾಮಾನ್ಯವಾಗಿ ಎಲ್ಲರು ತರಕಾರಿಗಳನ್ನು ಚೆನ್ನಾಗಿ ಬೇಯಿಸಬೇಕು ಎನ್ನುತ್ತಾರೆ. ಆದ್ರೆ ನೀವು ತರಕಾರಿಯನ್ನು ಬೇಯಿಸಿದಾಗ ಅದು ಮತ್ತಷ್ಟು ರುಚಿಯಾಗಲಿದೆ ಎಂಬ ಕಲ್ಪನೆ ಇದೆ. ಆದ್ರೆ ನೀವು ಹೆಚ್ಚು ಹೆಚ್ಚು ತರಕಾರಿಯನ್ನು ಬೇಯಿಸಿದಾಗ ಅದರಿಂದ ಪೌಷ್ಟಿಕಾಂಶ ನಷ್ಟವಾಗುವ ಭೀತಿ ಇರಲಿದೆ. ಕುದಿಯುವ ನೀರಿನಲ್ಲಿ ತರಕಾರಿಯಿಂದ ವಿಟಮಿನ್ ಸಿ, ಬಿ ಸೇರಿ ಪ್ರಮುಖ ಜೀವಸತ್ವಗಳು ನಾಶವಾಗಬಹುದು. ಹೀಗಾಗಿ ಹೆಚ್ಚು ಸಮಯ ನೀರಿನಲ್ಲಿ ತರಕಾರಿಗಳನ್ನು ಕುದಿಸಬಾರದು. ಕೇವಲ 2ರಿಂದ 3 ನಿಮಿಷಕ್ಕಿಂತಲೂ ಕಡಿಮೆ ಸಮಯ ನೀರಿನಲ್ಲಿ ಕುದಿಸುವುದು ಸೂಕ್ತ. ಹಾಗೆ ಬೇಯಿಸುವಾಗ ಮುಚ್ಚಳವನ್ನು ಮುಚ್ಚಿ ಹಬೆಯಲ್ಲಿ ಬೇಯಲು ಬಿಡುವುದು ಮುಖ್ಯವಾಗುತ್ತದೆ. ಇದರಿಂದ ಪೌಷ್ಟಿಕಾಂಶಗಳು ನಾಶವಾಗುವುದನ್ನು ತಡೆಯಬಹುದು.

ಅಡುಗೆಗೆ ಹೆಚ್ಚು ಎಣ್ಣೆ ಬಳಸುವುದು

ನೀವು ಅಡುಗೆ ಮಾಡುವಾಗ ಯಾವುದೇ ಖಾದ್ಯಕ್ಕೆ ಹೆಚ್ಚು ಎಣ್ಣೆಯನ್ನು ಬಳಸುವುದು ಕೂಡ ಆ ಅಡುಗೆಯ ಆರೋಗ್ಯಕರ ಅಂಶ ಹಾಳಾಗಲು ಕಾರಣವಾಗಲಿದೆ. ಎಣ್ಣೆಯ ಬಳಕೆ ಅಡುಗೆಯ ರುಚಿ ಹೆಚ್ಚಿಸಬಹುದು. ಆದ್ರೆ ಇದರಿಂದ ಕ್ಯಾಲೋರಿಗಳು ಹೆಚ್ಚಾಗುವುದರಿಂದ ಆರೋಗ್ಯಕರ ಅಡುಗೆ ಎನಿಸಿಕೊಳ್ಳುವುದಿಲ್ಲ. ಹೆಚ್ಚು ಎಣ್ಣೆ ಬಳಸಿ ಮಾಡುವ ಖಾದ್ಯವು ನಿಮ್ಮ ಆರೋಗ್ಯಕ್ಕೆ ಉತ್ತಮವೂ ಅಲ್ಲ. ಎಣ್ಣೆಯಲ್ಲಿ ಹುರಿಯುವುದು ಮತ್ತಷ್ಟು ಕ್ಯಾಲೋರಿಯನ್ನು ಆಹಾರಕ್ಕೆ ಸೇರಿಸಲಿದೆ. ಹೀಗಾಗಿ ಪಾಮ್ ಆಯಿಲ್ ಬದಲಿಗೆ ಆಲಿವ್ ಆಯಿಲ್, ಕೊಬ್ಬರಿ ಎಣ್ಣೆ ಬಳಸಿ ಅಡುಗೆ ಮಾಡುವುದು ಉತ್ತಮ.

ಅಡುಗೆಗೆ ಹೆಚ್ಚು ನೀರು ಬಳಸುವುದು

ನೀವು ಅಡುಗೆ ಮಾಡುವಾಗ ಮೊದಲೇ ನೀರಿನಲ್ಲಿ ತರಕಾರಿಗಳ ಒಮ್ಮೆ ಬೇಯಿಸಿಕೊಂಡಿರುತ್ತೀರಿ. ಹೀಗಾಗಿ ಮತ್ತೆ ಅಡುಗೆಗೆ ಹೆಚ್ಚು ನೀರನ್ನು ಬಳಸುವುದು ಉತ್ತಮವಲ್ಲ. ಇದರಿಂದ ಅಡುಗೆಯ ರುಚಿ ಹಾಳಾಗುವ ಜೊತೆಗೆ ವಿಟಮಿನ್‌ಗಳು, ಪೋಷಕಾಂಶಗಳ ನಾಶ ಉಂಟಾಗುವುದು ನೋಡಬಹುದು. ಅಧಿಕ ನೀರು ಇದ್ದಾಗ ಖಾದ್ಯ ಬೇಯಲು ಹೆಚ್ಚು ಸಮಯ ಹಿಡಿಯಲಿದೆ. ಇದು ನಿಮ್ಮ ಆಹಾರದ ರುಚಿ ಹಾಳು ಮಾಡಲಿದೆ. ಹಾಗೆ ಹೆಚ್ಚು ಉರಿಯಲ್ಲಿ ತರಕಾರಿಗಳ ಬೇಯಿಸುವುದು ಕೂಡ ಆಹಾರ ಹಾಳಾಗಲು ಕಾರವಾಗಬಹುದು. ಹೀಗಾಗಿ ಸಣ್ಣ ಉರಿಯಲ್ಲಿ ನಿಧಾನವಾಗಿ ಮಾಡುವ ಅಡುಗೆ ರುಚಿಕರವಾಗಿರಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries