ನೀವು ಬೆಳಗ್ಗೆ ತಿಂಡಿಗೆ ಇಡ್ಲಿ ಮಾಡಿ ಸವಿಯುವುದು ಕಾಮನ್. ಅದ್ರಲ್ಲು ಬೆಳಗ್ಗೆ ಆರೋಗ್ಯಕರ ತಿಂಡಿ ಸವಿಯುವ ಮಂದಿ ನೀವಾಗಿದ್ದರೆ ಇಡ್ಲಿ ಸವಿಯಲು ಬಹಳ ಇಷ್ಟಪಡುತ್ತೀರಿ. ದಕ್ಷಿಣ ಭಾರತದ ಬಹುತೇಕರ ಮನೆಯಲ್ಲಿ ವಾರದಲ್ಲಿ ಒಮ್ಮೆಯಾದರು ಇಡ್ಲಿ ಮಾಡಿಯೇ ಮಾಡುತ್ತಾರೆ. ಎಣ್ಣೆ ಕಡಿಮೆ ಬಳಸಿ ಮಾಡುವಂತಹ ಈ ಇಡ್ಲಿಯು ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ.
ಇನ್ನು ಇಡ್ಲಿಯಲ್ಲಿ ಹತ್ತು ಹಲವು ಬಗೆಯಲ್ಲಿ ಮಾಡಿ ಸವಿಯುವುದು ಸಹ ನೋಡಬಹುದು. ಹೋಟೆಲ್‌ಗಳಲ್ಲಿ ಹಲವು ಬಗೆಯ ಇಡ್ಲಿಯ ರುಚಿ ನೀವು ಸವಿದಿರಬಹುದು. ಮಸಾಲೆ ಇಡ್ಲಿ, ಹೂವಿನಂತ ಇಡ್ಲಿ, ಮೃದುವಾದ ಹತ್ತಿ ಇಡ್ಲಿ, ತಟ್ಟೆ ಇಡ್ಲಿ, ಕಪ್ ಇಡ್ಲಿ ಹೀಗೆ ಹತ್ತಾರು ಬಗೆ ಸವಿದಿರುತ್ತೀರಿ. ಆದ್ರೆ ಈ ಎಲ್ಲಾ ಇಡ್ಲಿ ಮಾಡಲು ಸರಿಯಾಗಿ ಹಿಟ್ಟು ಮಾಡಿಕೊಳ್ಳುವುದು ಹಾಗೆ ಇಡ್ಲಿ ಕುಕ್ಕರ್ ಕೂಡ ಮುಖ್ಯವಾಗುತ್ತದೆ.

ಆದ್ರೆ ಇಡ್ಲಿ ಮಾಡಲು ನಿಮಗೆ ಕುಕ್ಕರ್‌ನ ಅವಶ್ಯಕತೆ ಇರಲಿದೆ. ಆದರೆ ಇಡ್ಲಿ ಕುಕ್ಕರ್ ಬಳಸದೆಯೇ ಇಡ್ಲಿ ಮಾಡುವ ವಿಧಾನ ನಿಮಗೆ ತಿಳಿದಿದ್ಯಾ? ಹೌದು ಈ ರೀತಿ ಇಡ್ಲಿ ಮಾಡಲು ಇಡ್ಲಿ ಕುಕ್ಕರ್‌ನ ಅವಶ್ಯಕತೆ ಇಲ್ಲ. ಹಾಗೆ ಸುಲಭವಾಗಿ ಮಾಡಿ ಸವಿಯಬಹುದು. ಹಾಗಾದ್ರೆ ಇಡ್ಲಿ ಕುಕ್ಕರ್ ಬಳಸದೆಯೇ ಇಡ್ಲಿ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಇಡ್ಲಿ ಕುಕ್ಕರ್ ಇಲ್ಲದೆ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡು ಎಷ್ಟು ಸಮಯ ಹಿಡಿಯಲಿದೆ? ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಇಡ್ಲಿ ಕುಕ್ಕರ್ ಇಲ್ಲದೆ ಇಡ್ಲಿ ಮಾಡುವುದು ಹೇಗೆ?
- ಅಕ್ಕಿ
- ಉದ್ದಿನ ಬೇಳೆ
- ಎಣ್ಣೆ
- ಉಪ್ಪು
- ಸೋಡಾ
ಇಡ್ಲಿ ಕುಕ್ಕರ್ ಇಲ್ಲದೆ ಇಡ್ಲಿ ಮಾಡುವುದು ಹೇಗೆ?
ಒಂದು ಬೌಲ್‌ಗೆ 1 ಕಪ್ ಅಕ್ಕಿ ಹಾಗೆ ಅದೇ ಅಳತೆಯಲ್ಲಿ ಅರ್ಧ ಕಪ್ ಉದ್ದಿನ ಬೇಳೆ ಹಾಕಿಕೊಂಡು ನೀರು ಹಾಕಿ ತೊಳೆದು ಬೇರೆ ಬೇರೆಯಾಗಿ ನೆನೆಸಿಡಬೇಕು. (ಕುಚಲಕ್ಕಿ ಇದ್ದರೆ ಬಹಳ ಉತ್ತಮ) ಒಂದು ದಿನ ನೆನೆಸಿಟ್ಟ ಬಳಿಕ ಈಗ ಮಿಕ್ಸಿ ಜಾರ್ ತೆಗೆದುಕೊಂಡು ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಎರಡನ್ನೂ ಬೇರೆ ಬೇರೆಯಾಗಿ ರುಬ್ಬಿಕೊಳ್ಳಬೇಕು.
ನುಣ್ಣಗೆ ರುಬ್ಬಿದ ಹಿಟ್ಟನ್ನು ದೊಡ್ಡ ಪಾತ್ರೆಗೆ ಹಾಕಿಕೊಳ್ಳಿ. ಎರಡೂ ಹಿಟ್ಟನ್ನು ಒಂದೇ ಪಾತ್ರೆಗೆ ಹಾಕಿಕೊಳ್ಳಿ. ಹಾಗೆ ಇದಕ್ಕೆ ಉಪ್ಪು ಹಾಕಿಕೊಂಡು ಕೈಯಿಂದ 10 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ರಾತ್ರಿ ಮುಚ್ಚಳ ಮುಚ್ಚಿ ಹಿಟ್ಟು ಹದ ಬರಲು ಬಿಟ್ಟುಕೊಳ್ಳಿ.
ಮಾರನೆ ದಿನ ಬೆಳಗ್ಗೆ ಹಿಟ್ಟು ಹದಬಂದಿರಲಿದೆ. ಹುದುಗಿ ಬಂದ ಹಿಟ್ಟಿಗೆ ಚಿಟಿಕೆಯಷ್ಟು ಸೋಡಾ ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಈಗ ತಟ್ಟೆಗಳ ತೆಗೆದುಕೊಂಡು ಎಣ್ಣೆ ಹಚ್ಚಿ ಬಳಿಕ ಅದಕ್ಕೆ ಹಿಟ್ಟನ್ನು ಹಾಕಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಅಥವಾ ಕಡಾಯಿ ಇಟ್ಟುಕೊಂಡು ಅದರಲ್ಲಿ ಸ್ವಲ್ಪ ನೀರು ಹಾಕಿ ಕುದಿಬರಲು ಬಿಡಿ. ನೀರು ಸಣ್ಣಗೆ ಕುದಿಬರಲು ಆರಂಭಿಸಿದಾಗ ಒಂದು ದೊಡ್ಡ ತಟ್ಟೆಯನ್ನು ತಿರುಗಿಸಿಕೊಂಡು (ಉಲ್ಟಾ) ಆ ಪಾತ್ರೆಯ ಒಳಗೆ ಇಟ್ಟುಕೊಳ್ಳಿ. ಈಗ ಈ ತಟ್ಟೆಯ ಮೇಲೆ ಇಡ್ಲಿ ಹಾಕಿರುವ ತಟ್ಟೆಗಳನ್ನು ಒಂದೊಂದಾಗಿ ಇಡಿ. ಮುಚ್ಚಿರುವ ತಟ್ಟೆಯ ಅಡಿಯಲ್ಲಿ ನೀರು ಇರಬೇಕು.
ಈಗ ಮೇಲೆ ಮುಚ್ಚಳ ಮುಚ್ಚಿ ಕುದಿಯಲು ಬಿಡಿ. ಸುಮಾರು 10 ನಿಮಿಷ ಬೇಯಿಸಿಕೊಂಡರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಇಡ್ಲಿ ರೆಡಿಯಾಗುತ್ತದೆ. ಇಡ್ಲಿ ಕುಕ್ಕರ್ ಇಲ್ಲದೆಯೂ ಇದನ್ನು ಮಾಡಬಹುದು. ನೀವು ಕೂಡ ಕುಕ್ಕರ್ ಬಳಸದೆ ಅಥವಾ ಕುಕ್ಕರ್ ಇಲ್ಲದೆಯೂ ಮಾಡುವಂತಹ ಈ ಇಡ್ಲಿಯನ್ನು ಸವಿದು ನೋಡಿ.




