ಕಾಸರಗೋಡು: ಚೆಂಗಳ ರಹಮತ್ ನಗರ ಸಮಸ್ತ ಕೇರಳ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಮಂಡಳಿಯ ಆಶ್ರಯದಲ್ಲಿ ನಡೆಸಲಾಗುತ್ತಿರುವ ಮಾದಕ ದ್ರವ್ಯ ವಿರೋಧಿ ಅಭಿಯಾನದ ಅಂಗವಾಗಿ ಚೆಂಗಳ ರೇಂಜ್ ಮಟ್ಟದ ಉದ್ಘಾಟನೆ ರಹಮತ್ ನಗರದ ಅಲ್ ಮದ್ರಸತುಲ್ ಬದರಿಯಾದಲ್ಲಿ ನೆರವೇರಿತು.
ಅಮಲು ವ್ಯಕ್ತಿಯನ್ನು ಪ್ರಾಣಿಯಂತೆ ಮಾಡಬಹುದು.
ಸಮಸ್ತ ಜಿಲ್ಲಾ ಮುಶಾವರ ಸದಸ್ಯ ಟಿ.ಎಚ್. ಅಬ್ದುಲ್ ಖಾದರ್ ಫೈಝಿ ಅಭಿಯಾನ ಉದ್ಘಾಟಿಸಿ ಮಾತನಾಡಿ, ಮಾದಕ ವ್ಯಸನವು ಮಾನವ ಜೀವಕ್ಕೆ ಅಪಾಯಕಾರಿ ಮತ್ತು ದುಷ್ಕøತ್ಯಗಳ ಕೀಲಿಕೈಯಾಗಿದೆ. ಇದರಿಂದ ದೂರ ಉಳಿದಲ್ಲಿ ಜೀವನ ಸುಲಲಿತವಾಗಿ ಸಾಗಲು ಸಾಧ್ಯ ಎಂದು ತಿಳಿಸಿದರು. ರೇಂಜ್ ಮ್ಯಾನೇಜ್ ಮೆಂಟ್ ಅಧ್ಯಕ್ಷ ಎಂ.ಎಂ.ಮುಹಮ್ಮದ್ ಕುಞÂ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಹಾರಿಸ್ ದಾರಿಮಿ ಬೆದಿರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಹಮತ್ ನಗರ ಜುಮಾ ಮಸೀದಿಯ ಖತೀಬ್ ಅಬ್ದುಲ್ ಸಲಾಂ ಅಝ್ಹರಿ ವಿಷಯ ಮಂಡಿಸಿದರು. ವಿದ್ಯಾರ್ಥಿಗಳ ವಿಶೇಷ ಸಭೆಯಲ್ಲಿ ಎಸ್‍ಬಿವಿ ವಲಯ ಸಂಚಾಲಕ ಅಬು ಲಬೀಬ್ ಹಿಮಮಿ ಪ್ರಮಾಣ ವಚನ ಬೋಧಿಸಿದರು. ಸಹಿ ಸಂಗ್ರಹ ಅಭಿಯಾನವನ್ನು ನಿರ್ವಹಣಾ ವಲಯ ಕಾರ್ಯದರ್ಶಿ ಅಬ್ದುಲ್ ಗಫೂರ್ ಉದ್ಘಾಟಿಸಿದರು. ಜಮಾಅತ್ ಅಧ್ಯಕ್ಷ ಶಂಸುದ್ದೀನ್ ಹಾಜಿ ಎಂಜಿನಿಯರ್ ಒಂದು ವಾರ-ಒಂದು ಜ್ಞಾನ ಎಂಬ ಪ್ರಶ್ನೋತ್ತರ ಅವಧಿಯನ್ನು ನಡೆಸಿಕೊಟ್ಟರು. ಅಲ್ ಮದ್ರಸತುಲ್ ಬದರಿಯ್ಯ ಮದ್ರಸ ವಿದ್ಯಾರ್ಥಿಗಳು ಮಾದಕ ವಿರೋಧಿ ಗೀತೆಯನ್ನು ಹಾಡಿದರು. ಎಸ್‍ಬಿವಿ ರೇಂಜ್ ಕನ್ವೀನರ್ ಹಾಫಿಲ್ ದಾರಿಮಿ, ಪಿಟಿಎ ಅಧ್ಯಕ್ಷ ಹನೀಫ್ ಎರಿಯಾಲ್, ಮಜೀದ್ ರಹಮತ್ ನಗರ, ಸಮದ್, ಎಂ.ಎಂ. ಖಾದರ್, ಅಬ್ದುಲ್ ರಹಿಮಾನ್ ಅಸ್ನವಿ, ಬದ್ರುದ್ದೀನ್ ಅಝ್ಹರಿ, ಇಬ್ರಾಹಿಂ ಹನೀಫಿ, ರಹೀಮ್ ತಾಜ್, ಮಹ್ಮದ್ ಲತೀಫಿ ಪಲ್ಗೊಂಡಿದ್ದರು.





