ಕಾಸರಗೋಡು: "ಸಮುದ್ರದ ಮಕ್ಕಳಿಗೆ ಸಮುದ್ರದ ಹಕ್ಕು" ಎಂಬ ಘೋಷಣೆಯೊಂದಿಗೆ ಕೇರಳ ಯೂತ್ ಫ್ರಂಟ್(ಎಂ) ರಾಜ್ಯಾಧ್ಯಕ್ಷ ಸಿರಿಯಾಕ್ ಚಾಯಿಕಾಡನ್ ನೇತೃತ್ವ ವಹಿಸುತ್ತಿರುವ ಕರಾವಳಿ ಸಂರಕ್ಷಣಾ ಯಾತ್ರೆಗೆ ಕಾಸರಗೋಡಿನಿಂದ ಚಾಲನೆ ನೀಡಲಾಯಿತು.
ಕಾಸರಗೋಡು ಕಡಪ್ಪುರದಿಂದ ಆರಂಭಗೊಂಡ ಯಾತ್ರೆಗೆ ಕೇರಳ ಕಾಂಗ್ರೆಸ್ (ಎಂ) ಅಧ್ಯಕ್ಷ, ಸಂಸದ ಜೋಸ್ ಕೆ.ಮಾಣಿ ಅವರು ಜಾಥಾ ನಾಯಕ, ಯೂತ್ ಫ್ರಂಟ್ (ಎಂ) ರಾಜ್ಯ ಅಧ್ಯಕ್ಷ ಸಿರಿಯಾಕ್ ಚಾಯಿಕಾಡನ್ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಸಿರಿಯಾಕ್ ಚಾಯಿಕಾಡನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ವಕೀಲ ಅಲೆಕ್ಸ್ ಕೊಯಿಮಲ ಪ್ರಾಸ್ತಾವಿಕ ಮಾತುಗಳನ್ನಡಿದರು. ಶ್ರೀ ಕುರುಂಬ ಭಗವತಿ ದೇವಸ್ಥಾನದ ಅಧ್ಯಕ್ಷ ಕೆ.ಪ್ರಭಾಕರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೇರಳ ಕಾಂಗ್ರೆಸ್(ಎಂ) ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕುರಿಯಾಕೋಸ್ ಪ್ಲಾಪರಂಪಿಲ್ ಮುಖ್ಯ ಭಾಷಣ ಮಾಡಿದರು. ಕೇರಳ ಕಾಂಗ್ರೆಸ್ (ಎಂ) ಜಿಲ್ಲಾಧ್ಯಕ್ಷ ಸಾಜಿ ಸೆಬಾಸ್ಟಿಯನ್, ಸಾಜಿ ಕುಟ್ಟನಿಮಟ್ಟಂ,ಮುಖಂಡರಾದ ಸಜನ್ ತೊಡುಕ, ಬಿಜು ತುಳಿಸ್ಸೆರಿ, ಜಾಯ್ ಕೊನ್ನಕ್ಕಲ್, ಸಿನೋಜ್ ಚಾಕೋ, ಡಾವಿ ಸ್ಟೀಪನ್, ಶರತ್ ಜೋಸ್, ಅಮಲ್ ಜಾಯ್ ಕೊನ್ನಕ್ಕಲ್, ಶಿಬು ಥಾಮಸ್, ಸಿಜೋ ಪ್ಲಾಂತೋಟ್ಟಂ, ದೋಬಿ ತೈಪರಂಬಿಲ್, ಎಸ್.ಅಯ್ಯಪ್ಪನ್ ಪಿಳ್ಳೈ, ಜೋಮೋನ್ ಪೆÇೀಡಿಪಾರ, ಜೋಶುವಾ ರಾಜು, ರನೀಶಕರಿಮಟ್ಟಂ, ಬಿಜೋ ಪಿ ಬಾಬು, ಮತ್ತು ಜೆಸ್ಸಲ್ ವರ್ಗೀಸ್ ಉಪಸ್ಥಿತರಿದ್ದರು.
ಕೇರಳ ಯೂತ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ (ಕಚೇರಿ ಉಸ್ತುವಾರಿ) ಶೇಖ್ ಅಬ್ದುಲ್ಲಾ ಸ್ವಾಗತಿಸಿದರು. ರಾಜ್ಯ ಐಟಿ ಸಂಯೋಜಕ ಅಭಿಲಾಷ್ ಮ್ಯಾಥ್ಯೂ ವಂದಿಸಿದರು.




