ಕಾಸರಗೋಡು: 'ಸ್ನೇಹಿತರೇ ಮಾದಕ ವಸ್ತು' ಎಂಬ ಧ್ಯೇಯದೊಂದಿಗೆ ಇರಿಯಣ್ಣಿ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲಾ 1995-96ನೇ ಸಾಲಿನ ಎಸ್ಸೆಸೆಲ್ಸಿ ಬ್ಯಾಚಿನ ಹಳೇ ವಿದ್ಯಾರ್ಥಿ ಸಂಗಮ ಆಯೋಜಿಸಲಾಯಿತು.
ಇರಿಯಣ್ಣಿ ಪೆÇೀಲಿಯನ್ ತುರುತ್ತು ಇಕೋ ಟೂರಿಸ್ಟ್ ಪ್ಲೇಸ್‍ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾದಕ ದ್ರವ್ಯಕ್ಕೆದುರಾಗಿ ಪ್ರತಿಜ್ಞೆ ಕೈಗೊಳ್ಳುವುದರ ಜತೆಗೆ ಮಾದಕ ದ್ರವ್ಯ ವಿರೋಧಿ ಅಭಿಯಾನಕ್ಕೆ ಚಾಲನೆ ನೀಡಿದರು. ಪೂರ್ವ ವಿದ್ಯಾರ್ಥಿಗಳೆಲ್ಲರೂ ಎರಡುವರೆ ದಶಕಗಳ ನಂತರ ಒಟ್ಟು ಸೇರಿ ವಿವಿಧ ಕಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಕೆ. ವಿನೋದ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಜೇಶ್ ಕುಮಾರ್, ಬಿಜು.ಆರ್, ಸೋಮಶೇಖರನ್, ಬಾಲಕೃಷ್ಣನ್, ಸುರೇಶ್ ಕುಮಾರ್, ಶ್ರೀಕಲಾ, ಅನಿತಾಕುಮಾರಿ, ಶಾಲಿನಿ, ಸಜೀಶ್ ಕುಮಾರ್ ಪೂರ್ವ ವಿದ್ಯರ್ತಿ ಸಂಗಮಕ್ಕೆ ನೇತೃತ್ವ ನೀಡಿದರು. ಸತ್ಯನ್ ಕೆ ಸ್ವಾಗತಿಸಿದರು.





