ಕಾಸರಗೋಡು: ಭೂಮಿಕಾ ಪ್ರತಿಷ್ಠಾನ ಉಡುಪಮೂಲೆ (ರಿ) ಎಡನೀರು ವತಿಯಿಂದ 13 ನೇ ವರ್ಷದ ಐದು ದಿನಗಳ ಉಚಿತ ಕನ್ನಡ ಸಂಸ್ಕøತಿ ಶಿಬಿರವು ಎಡನೀರಿನ ಶ್ರೀ ಈಶ್ವರಾನಂದ ಭಾರತಿ ಸ್ವಾಮೀಜೀಸ್ ಹೈಯರಿ ಸೆಕೆಂಡರಿ ಶಾಲೆಯಲ್ಲಿ ಜರಗಿತು.
ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳು ಶಿಬಿರ ಉದ್ಘಾಟಿಸಿ ಆಶೀರ್ವಚನ ನಿಡಿದರು. ಬಿ. ಎ.ಆರ್. ಎಚ್. ಬೋವಿಕ್ಕಾನ ಶಾಲೆಯ ಮ್ಯಾನೇಜರ್ ಗಂಗಾಧರ ನಾಯರ್ ಪಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಐದು ದಿನಗಳ ತನಕ ಜರುಗಿದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನಿರ್ಮಲ್ ಕುಮಾರ್ ಮುಳ್ಳೇರಿಯ, ವಿನೋದ್ ಚೇವಾರು , ಕಿಶೋರ್ ಪೆರ್ಲ, ತೇಜಸ್, ಅರವಿಂದಾಕ್ಷ ಮಾಣಿಲ, ಅಶೋಕ್ ಕೊಡ್ಲಮೊಗರು, ಕೃತಿ, ವೈಷ್ಣವಿ ಭಾಗವಹಿಸಿ ವ್ಯಕ್ತಿತ್ವ ವಿಕಸನ, ವಿಜ್ಞಾನ ವಿನೋದ, ವೆಜಿಟೇಬಲ್ ಕಾರ್ವಿಂಗ್, ಗಾನ ಸುಧಾ, ದೇಶ ಭಕ್ತಿ ಗೀತೆ, ಭಾವ ಗೀತಾ ಲಹರಿ, ಥಿಯೇಟರ್ ಗೇಮ್, ಮೋಜಿನ ಗಣಿತ, ರಂಗ ಗೀತೆ ಮೊದಲಾದ ವಿಷಯಗಳ ಕುರಿತು ತರಗತಿ ನಡೆಸಿಕೊಟ್ಟರು.
ಸಮಾರೋಪ ಸಮಾರಂಭದಲ್ಲಿ ಸಾಮಾಜಿಕ ಮುಂದಾಳು ಪ್ರಭಾಕರ ಕಲ್ಲೂರಾಯ ಅಧ್ಯಕ್ಷತೆ ವಹಿಸಿದ್ದರು. ಎಡನೀರು ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಸರಸ್ವತಿ ಎಡನೀರು, ಚೆಂಗಳ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶಾಂತಾ ಕುಮಾರಿ, ಭೂಮಿಕಾ ಪ್ರತಿಷ್ಠಾನದ ಕೋಶಾಧಿಕಾರಿ ರಾಘವೇಂದ್ರ ಭಟ್ ಉಡುಪಮೂಲೆ, ಅಶೋಕ್ ಕೊಡ್ಲಮೊಗರು ಉಪಸ್ಥಿತರಿದ್ದರು. ಈ ಸಂದರ್ಭ ಶಿಬಿರರ್ತಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಭೂಮಿಕಾ ಪ್ರತಿಷ್ಠಾನದ ಅಧ್ಯಕ್ಷೆ ಅನುಪಮ ಉಡುಪಮೂಲೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಹನಾ ,ಮಯೂರಿ ಮತ್ತು ಮನವಿ ಸಹಕಾರ ನೀಡಿದರು.





