ಕಾಸರಗೋಡು: ಬಜಪೆ ಕಿನ್ನಿಪದವಿನಲ್ಲಿ ನಡದ ಯುವಕನ ಕೊಲೆಯ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ದ.ಕ ಜಿಲ್ಲಾ ಬಂದ್ ಕಾಸರಗೋಡು ಜಿಲ್ಲೆಯಲ್ಲೂ ಪರಿಣಾಮ ಬೀರಿತ್ತು. ಕಾಸರಗೋಡಿನಿಂದ ಮಂಗಳೂರು, ಸುಳ್ಯ, ಪುತ್ತೂರು ಸೇರಿದಂತೆ ವಿವಿಧ ಕೇಂದ್ರಗಳಿಗೆ ಸಂಚರಿಸುತ್ತಿದ್ದ ಕೇರಳ ಹಾಗೂ ಕರ್ನಾಟಕದ ರಸ್ತೆಸಾರಿಗೆ ಸಂಸ್ಥೆ ಬಸ್‍ಗಳು ಹಾಗೂ ಖಾಸಗಿ ಬಸ್‍ಗಳು ಸಂಚಾರ ಸ್ಥಗಿತಗೊಳಿಸಿತ್ತು. ಕಾಸರಗೋಡಿನಿಂದ ಗಡಿ ಪ್ರದೇಶ ಅಡ್ಕಸ್ಥಳ, ತಲಪ್ಪಾಡಿ ಹಾಗೂ ಜಾಲ್ಸೂರ್‍ನ ಗಡಿ ಪ್ರದೇಶದ ವರೆಗೆ ಕೆಎಸ್ಸಾಟಿಸಿ ಬಸ್‍ಗಳು ಸಂಚರ ಸೀಮಿತಗೊಳಿಸಿತ್ತು.
ದ. ಕ ಜಿಲ್ಲಾದ್ಯಂತ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಬಂದ್‍ಗೆ ಕರೆನೀಡಲಾಗಿದ್ದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಬದಿಯಡ್ಕ ಹಾಗೂ ಆದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇರಳ ಪೊಲೀಸರು ಹೆಚ್ಚಿನ ಕಟ್ಟೆಚ್ಚರ ಪಾಲಿಸಿದ್ದರು. ಪುತ್ತುರಿನಿಂದ ಪಾಣಾಜೆ, ಪೆರ್ಲ ಹಾದಿಯಾಗಿ ವಿಟ್ಲಕ್ಕೆ ಸಂಚರಿಸುತ್ತಿದ್ದ ಖಾಸಗಿ ಬಸ್‍ಗಳೂ ಸಂಚಾರ ಮೊಟಕುಗೊಳಿಸಿತ್ತು. ಕಾಸರಗೋಡಿನಿಂದ ಗಡಿ ಪ್ರದೇಶದ ವರೆಗೆ ಖಾಸಗಿ ಬಸ್‍ಗಳು ಸಂಚಾರ ಸೀಮಿತಗೊಳಿಸಿತ್ತು. ದ. ಕ ಜಿಲ್ಲೆಯಲ್ಲಿ ವಿದ್ಯಾಬ್ಯಾಸ ಸಂಸ್ಥೆಗಳಿಗೆ ರಜೆ ಸಾರಲಾಗಿದ್ದ ಹಿನ್ನೆಲೆಯಲ್ಲಿ ಕಾಸರಗೋಡಿನಿಂದ ದ.ಕ ಜಿಲ್ಲೆಯ ವಿವಿಧೆಡೆ ವಿದ್ಯಾರ್ಜನೆಗಾಗಿ ತೆರಳುವ ವಿದ್ಯಾರ್ಥಿಗಳಲ್ಲಿ ಸಮಾಧಾನ ತಂದುಕೊಟ್ಟಿತ್ತು.





