ಉಪ್ಪಳ: ಬಿರುಸಾಗಿ ಸುರಿಯುತ್ತಿದ್ದ ಮಳೆಗೆ ಹತ್ತು ವರ್ಷದ ಬಾಲಕನನ್ನು ಆಸ್ಪತ್ರೆಗೆ ಕೊಂಡೊಯ್ಯುತಿದ್ದ ಆಂಬ್ಯುಲೆನ್ಸ್ ಸೇರಿದಂತೆ ಐದು ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಆಂಬ್ಯುಲೆನ್ಸ್ ನಲ್ಲಿದ್ದ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಕಣ್ಣೂರು ನಿವಾಸಿ ಶಾಹಿನಾ (48) ಸಾವನ್ನಪ್ಪಿದ ದುರ್ದೈವಿ. ಜೊತೆಗಿದ್ದ ಬಾಲಕನ ಚಿಕ್ಕಮ್ಮ ಚಿಂತಾಜನಕ ಸ್ಥಿತಿಯಲ್ಲಿ ತೀವ್ರನಿಘಾ ಘಟಕದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಗಾಯಗೊಂಡ ಇತರ 5 ಮಂದಿ ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.
ಮಂಗಳವಾರ ಸಂಜೆ ಉಪ್ಪಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾಸರಗೋಡು ಭಾಗದಿಂದ ಮಂಗಳೂರು ಆಸ್ಪತ್ರೆಗೆ 10 ವರ್ಷದ ಬಾಲಕನನ್ನು ಕೊಂಡೊಯ್ಯುತಿದ್ದ ಆಂಬ್ಯುಲೆನ್ಸ್ ಎದುರಿನಿಂದ ಬರುತಿದ್ದ ಕಾರಿಗೆ ಡಿಕ್ಕಿ ಹೊಡೆಯಿತು. ಈ ಸಂದರ್ಭ ಈ ಎರಡೂ ವಾಹನಗಳ ಹಿಂದಿನಿಂದ ಆಗಮಿಸುತಿದ್ದ ಇತರ ಮೂರು ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಸರಣಿ ವಾಹನ ಅಪಘಾತ ಸಂಭವಿಸಿತು.




.jpg)
