HEALTH TIPS

ಮುರ್ಶಿರಾಬಾದ್ ಗಲಭೆ: ಕೇಂದ್ರಕ್ಕೆ ಬಂಗಾಳ ರಾಜ್ಯಪಾಲರಿಂದ ವರದಿ

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದ್ದ ಕೋಮುಗಲಭೆ ಕುರಿತಂತೆ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದಾರೆ. 'ಮೂಲಭೂತವಾದಿತನ ಮತ್ತು ತೀವ್ರಗಾಮಿತನ ಎಂಬ ಪಿಡುಗುಗಳು ರಾಜ್ಯವನ್ನು ತೀವ್ರವಾಗಿ ಕಾಡುತ್ತಿವೆ' ಎಂದು ಉಲ್ಲೇಖಿಸಿದ್ದಾರೆ.

ಕೋಮುಗಲಭೆ ತನಿಖೆಗೆ ಆಯೋಗ ರಚಿಸಬೇಕು, ಬಾಂಗ್ಲಾದ ಗಡಿ ಜಿಲ್ಲೆಗಳಲ್ಲಿ ಕೇಂದ್ರ ಪಡೆಗಳ ಉಪಠಾಣೆ ಸ್ಥಾಪಿಸಬೇಕು ಎಂದು ಸಲಹೆ ಮಾಡಿದ್ದಾರೆ. ಅಲ್ಲದೆ, 'ಸಂವಿಧಾನದ ವಿಧಿ 356ರ ಜಾರಿ ಆಯ್ಕೆಯೂ ಮುಕ್ತವಾಗಿರಬೇಕು' ಎಂದಿದ್ದಾರೆ.

ವರದಿಯಲ್ಲಿ ಸಂವಿಧಾನದ ವಿಧಿ 356ರ ಉಲ್ಲೇಖ ಕುರಿತ ಪ್ರಶ್ನೆಗೆ ಅಧಿಕಾರಿಯೊಬ್ಬರು, 'ವಿಧಿ 356ರ ಪ್ರಕಾರ ಕೇಂದ್ರದ ಕ್ರಮಕ್ಕೆ (ರಾಷ್ಟ್ರಪತಿ ಆಡಳಿತ) ಮುಂದಾಗಬೇಕು ಎಂದು ರಾಜ್ಯಪಾಲರು ‌ಹೇಳಿಲ್ಲ. ಆದರೆ, ರಾಜ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟರೆ ಆ ಆಯ್ಕೆಯನ್ನು ಕೇಂದ್ರ ಮುಕ್ತವಾಗಿ ಇರಿಸಿಕೊಂಡಿರಬೇಕು' ಎಂಬುದು ಇದರ ಉದ್ದೇಶ' ಎಂದು ಉತ್ತರಿಸಿದ್ದಾರೆ.

ಸಂವಿಧಾನದ ವಿಧಿ 356 ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವುದಕ್ಕೆ ಸಂಬಂಧಿಸಿದ್ದಾಗಿದೆ.

ಮುರ್ಶಿದಾಬಾದ್‌ನಲ್ಲಿ ಕಂಡುಬಂದ ಗಲಭೆ ಇತರೆ ಜಿಲ್ಲೆಗಳಿಗೂ ಹರಡಿದ್ದಕ್ಕೆ ಕಳವಳ ವ್ಯಕ್ತಪಡಿಸಿರುವ ರಾಜ್ಯಪಾಲರು, 'ಕಾನೂನು ಸುವ್ಯವಸ್ಥೆ ವಿಷಯದಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರ ಜೊತೆಗೆ, ವಸ್ತುಸ್ಥಿತಿಯನ್ನು ಪರಿಶೀಲಿಸುವ ಸಂವಿಧಾನದ ಇತರೆ ಆಯ್ಕೆಗಳನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು' ಎಂದು ಶಿಫಾರಸು ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries