HEALTH TIPS

ಕೇಂದ್ರ ಪ್ರೀಮೆಟ್ರಿಕ್ ಸ್ಕಾಲರ್‍ಶಿಪ್‍ಗಾಗಿ ಅರ್ಜಿ ಆಹ್ವಾನ

ಕಾಸರಗೋಡು: ಅನಾರೋಗ್ಯಕರ ಪರಿಸರದಲ್ಲಿ ಕೆಲಸ ನಿರ್ವಹಿಸುತ್ತಿರುವವರನ್ನು ಅವಲಂಬಿಸಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ 2024-25ನೇ ಸಾಲಿನ ಕೇಂದ್ರೀಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಆಹ್ವಾನಿಸಲಾಗಿದೆ.  

2024-25ನೇ ಸಾಲಿಗೆ ಇ-ಅನುದಾನ ಪೆÇೀರ್ಟಲ್‍ನಲ್ಲಿ ನೋಂದಾಯಿಸಲಾದ ಜಿಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಜಾತಿ, ಧರ್ಮ ಮತ್ತು ಆದಾಯವನ್ನು ಲೆಕ್ಕಿಸದೆ ಅರ್ಜಿ ಸಲ್ಲಿಸಬಹುದು. ಚರ್ಮದ ಕೆಲಸಗಾರರು, ಕಸ ಸಂಗ್ರಹಿಸುವವರು ಮತ್ತು ತ್ಯಾಜ್ಯ ವಿಲೇವಾರಿಯಲ್ಲಿ ತೊಡಗಿರುವವರನ್ನು ಅವಲಂಬಿಸಿರುವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಬಹುದು.

ಹಸಿರುಕ್ರಿಯಾ ಸೇನಾ ಕಾರ್ಯಕರ್ತರ ಅವಲಂಬಿತರು ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುವುದಿಲ್ಲ.  ಅರ್ಹ ವಿದ್ಯಾರ್ಥಿಗಳು ತಮ್ಮ ಹೆತ್ತವರು ಅಥವಾ ಪೆÇೀಷಕರ ಉದ್ಯೋಗವನ್ನು ಸಾಬೀತುಪಡಿಸಲು ಸಂಬಂಧಿತ ಸ್ಥಳೀಯಾಡಳಿತವನ್ನು ಸಂಪರ್ಕಿಸಬೇಕು. ಅರ್ಜಿಯನ್ನು ವಿದ್ಯಾರ್ಥಿಯು ಓದುತ್ತಿರುವ ಸಂಸ್ಥೆಯ ಮುಖ್ಯಸ್ಥರ ಮೂಲಕ ಸ್ಥಳೀಯಾಡಳಿತ ಸಂಸ್ಥೆ ಕಾರ್ಯದರ್ಶಿ ಅಥವಾ ಸಮಾಜ ಕಲ್ಯಾಣ ಅಧಿಕಾರಿಯಿಂದ ಪ್ರಮಾಣಪತ್ರ ಪಡೆದುಕೊಳ್ಳಬೇಖು. ವಿದ್ಯಾರ್ಥಿಯು ಅಂಗವಿಕಲನಾಗಿದ್ದರೆ ಅಂಗವಿಕಲನೆಂದು ಸಾಬೀತುಪಡಿಸುವ ಪ್ರಮಾಣಪತ್ರ ಮತ್ತು  ಹಾಸ್ಟೆಲ್ ವಾಸ್ತವ್ಯ ಹೊಂದಿದ್ದರೆ, ಇನ್‍ಮೇಟ್ ಸರ್ಟಿಫಿಕೇಟ್‍ನೊಂದಿಗೆ ತಾನು ಕಲಿಯುವ ಶಾಲಾ ಅಧಿಕಾರಿಯ ಮೂಲಕ ಇ ಗ್ರ್ಯಾಂಟ್‍ನೊಂದಿಗೆ ಎಸ್‍ಸಿಡಿಓ ಕಚೇರಿಗೆ ಕಳುಹಿಸಬೇಕು ಮತ್ತು ಪ್ರಮಾಣಪತ್ರಗಳ ಪ್ರತಿಗಳನ್ನು ಎಸ್‍ಸಿಡಿಓ ಕಚೇರಿಗೆ ಸಲ್ಲಿಸಬೇಕು.  ಅರ್ಜಿಗಳನ್ನು ಸ್ವೀಕರಿಸಲು ಮೇ 31 ಕೊನೇ ದಿನಾಂಕವಾಘಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(0499 4256162)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries