ನವದೆಹಲಿ: ಗುಜರಾತ್‌ನಲ್ಲಿ ಎರಡು ಹಾಗೂ ಕೇರಳ, ಪಂಜಾಬ್, ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ವಿಧಾನಸಭಾ ಕ್ಷೇತ್ರಗಳಿಗೆ ಜೂನ್ 19ರಂದು ಉಪ ಚುನಾವಣೆ ನಡೆಯಲಿದ್ದು, ಜೂನ್ 23ರಂದು ಮತಎಣಿಕೆ ಕಾರ್ಯ ನಡೆಯಲಿದೆ.
ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಮುಂದಿನ ಒಂದು ವರ್ಷದಲ್ಲಿ ಸಾರ್ವತ್ರಿಕ ಚುನಾವಣೆಯು ನಡೆಯಲಿರುವ ಈ ಹಿನ್ನೆಲೆಯಲ್ಲಿ ಈಗಿನ ಚುನಾವಣೆ ಗಮನಸೆಳೆಯುತ್ತಿದೆ.
ಕೇರಳದ ನೀಲಾಂಬುರ್ ಕ್ಷೇತ್ರದ ಪಕ್ಷೇತರ ಶಾಸಕರಾಗಿದ್ದ ಪಿ.ವಿ. ಅನ್ವರ್ ಹಾಗೂ ಗುಜರಾತ್‌ನ ವಿಸವಾದರ್ ಕ್ಷೇತ್ರದಲ್ಲಿ ಆಪ್ ಶಾಸಕ ಭಯನಿ ಭೂಪೇಂದ್ರಭಾಯಿ ಅವರ ರಾಜೀನಾಮೆಯಿಂದ ಈ ಕ್ಷೇತ್ರಗಳ ಸ್ಥಾನಗಳು ತೆರವಾಗಿವೆ.
ಬಂಗಾಳದ ಕಾಲಿಗಂಜ್ ಕ್ಷೇತ್ರದಲ್ಲಿ ಟಿಎಂಸಿ ಶಾಸಕ ನಸೀರುದ್ದೀನ್ ಅಹ್ಮದ್, ಪಂಜಾಬ್‌ನ ಲೂಧಿಯಾನ ಪಶ್ಚಿಮ ಕ್ಷೇತ್ರದ ಆಪ್ ಶಾಸಕ ಗುರ್‌ಪ್ರೀತ್ ಬಸ್ಸಿ ಗೋಗಿ ಮತ್ತು ಗುಜರಾತ್‌ನ ಕಾಡಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಕರ್ಸನ್‌ಭಾಯಿ ಗಂಡುಭಾಯಿ ಅವರ ನಿಧನದಿಂದಾಗಿ ತೆರವಾಗಿರುವ ಸ್ಥಾನಗಳಿಗೆ ಈಗ ಉಪಚುನಾವಣೆ ನಡೆಯಲಿದೆ.






