ಕುಂಬಳೆ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಭಾಗವಾಗಿ ಕುಂಬಳೆಯಲ್ಲಿ ಟೋಲ್ ಗೇಟ್ ಸ್ಥಾಪಿಸುವ ಕ್ರಮವನ್ನು ಕೈಬಿಡಬೇಕೆಂದು ಒತ್ತಾಯಿಸಿ ಕ್ರಿಯಾ ಸಮಿತಿ ಮುಷ್ಕರವನ್ನು ತೀವ್ರಗೊಳಿಸಿದೆ.
ಭಾನುವಾರ ಪ್ರತಿಭಟನಕಾರರು ಕೆಲಸ ಸ್ಥಗಿತಗೊಳಿಸಿದ ಬಳಿಕ, ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಟೋಲ್ ಬೂತ್ ನಿರ್ಮಾಣ ಸ್ಥಳಕ್ಕೆ ಸೋಮವಾರ ರಾತ್ರಿ ಮೆರವಣಿಗೆ ನಡೆಸಲಾಯಿತು.ರಾತ್ರಿ 8 ಗಂಟೆಗೆ ಕುಂಬಳೆ ನಗರದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು.
ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ ಆಳ್ವ ಪ್ರತಿಭಟನೆ ಉದ್ಘಾಟಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಪಿ.ಕೆ. ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದ್ದರು.
ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ಸಿ.ಎ. ಜುಬೈರ್, ಲಕ್ಷ್ಮಣ ಪ್ರಭು ಕುಂಬಳೆ, ಎ.ಕೆ. ಆರಿಫ್, ಬಿ.ಎ. ರಹಮಾನ್, ಸಿದ್ದೀಕ್ ಕುಂಬಳೆ, ಝುಬೈರ್ ಪಡ್ಪು, ಅಹ್ಮದಲಿ ಕುಂಬಳೆ, ಅಬ್ದುಲ್ ಲತೀಫ್ ಕುಂಬಳೆ, ನಾಸರ್ ಬಂಬ್ರಾಣ, ಎಂ.ಎ.ಕಳತ್ತೂರು, ಅನ್ವರ್ ಸಿಟಿ, ಮಮ್ಮು ಮುಬಾರಕ್, ಕೆ.ಬಿ. ಯೂಸುಫ್, ಬಿ.ಎನ್. ಮುಹಮ್ಮದ್ ಅಲಿ ಮಾತನಾಡಿದರು.ಕಾಸರಗೋಡು ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ಸ್ವಾಗತಿಸಿ, ವಂದಿಸಿದರು.

.jpg)
.jpg)
