ಕಾಸರಗೋಡು: ಗೋಕುಲಂ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ಆಶ್ರಯದಲ್ಲಿ ನಡೆದ ವೈಶಾಖ ನಟನಂ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ನಾಯರ್ ಸಹೋದರಿಯರೆಂದೇ ಖ್ಯಾತರಾದ ವೀಣಾ ನಾಯರ್ ಮತ್ತು ಧನ್ಯ ನಾಯರ್ ಅವರು ಶ್ರೀಭಾಗವತದ ನವವಿಧ ಭಕ್ತಿಯನ್ನು ಆಧರಿಸಿ ಗೋಶಾಲೆಯಲ್ಲಿ ನೃತ್ಯ ಪ್ರದರ್ಶನ ನೀಡಿದರು. ಐದು ವರ್ಷದ ಕಾರ್ತಿಕೇಯನ್ ಕೃಷ್ಣನ ವೇಷದೊಂದಿಗೆ ಜೊತೆಗೂಡಿ ಗಮನಸೆಳೆದನು.
ಒಂಬತ್ತನೇ ದಿನ, ತಿರುವನಂತಪುರಂನ ಕಲ್ಯಾಣಿ ವಿ ಪ್ರಶಾಂತ್ ಮತ್ತು ಶ್ರುತಿ ತಂಬುರಾಟಿ ಕೊಲ್ಲಂ, ಶ್ರೀಭದ್ರ ಬೆಂಗಳೂರು, ದೀಪಾ ಮತ್ತು ದೇವಿಕಾ ಪರಮೇಶ್ವರ ಮುಂಬೈ, ಆನಂದ್ ಸಚ್ಚಿದಾನಂದನ್ ಮುಂಬೈ, ಪ್ರಿಯಾಂಜಲಿ ರಾವ್ ತ್ರಿಶೂರ್, ಕಾವ್ಯ ಮತ್ತು ಸೌಪರ್ಣಿಕಾ, ನೀಲೇಶ್ವರ, ಸುರೇಂದ್ರನ್ ಪಟ್ಟೇನಾ ನೀಲೇಶ್ವರ ಸುರೇಂದ್ರನ್ ಪಟ್ಟೇನಾ ಪಯ್ಯನೂರು, ಪೆರುಮ್ ಪಟ್ಟೇನಾ ಪಯ್ಯನೂರು ರಾವುತಂರಾ, ಚೆನ್ನೈ ನ ಕೃಷ್ಣವೇಣಿ ಮೊದಲಾದವರು ಗೋಶಾಲಾ ನಂದಿ ಮಂಟಪದಲ್ಲಿ ನೃತ್ಯ ಪ್ರದರ್ಶಿಸಿದರು. ಜಿಲ್ಲೆಯ ಹೆಸರಾಂತ ನೃತ್ಯ ಶಿಕ್ಷಕ ಸುರೇಂದ್ರನ್ ಪಡನ್ನ ಅವರನ್ನು ಪರಂಪರಾ ವಿದ್ಯಾಪೀಠವು ಸನ್ಮಾನಿಸಿತು.




.jpg)
