ಕಾಸರಗೋಡು: ಹವಾಮಾನ ಬದಲಾವಣೆಯಿಂದ ಕಂಗು ಕೃಷಿಗೆ ತಗುಲಿದ ಅಪರಿಚಿತ ರೋಗದಿಂದಾಗಿ ರೈತರು ಬೆಳೆ ಹಾನಿ ಮತ್ತು ಬೆಳೆ ವೈಫಲ್ಯವನ್ನು ಅನುಭವಿಸಿ ತೀವ್ರ ಬಿಕ್ಕಟ್ಟಿನಲ್ಲಿದ್ದಾರೆ. ಜಿಲ್ಲೆಯ ಅಡಕೆ ರೈತರಿಗೆ ವಿಶೇಷ ಪ್ಯಾಕೇಜ್ ನಿಗದಿಪಡಿಸಬೇಕು, ಎಲ್ಲಾ ಅಡಕೆ ರೈತರ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಪ್ರಧಾನ ಕೃಷಿ ಅಧಿಕಾರಿಗೆ ಕಿಸಾನ್ ಸೇನೆ ಶುಕ್ರವಾರ ಮನವಿ ಸಲ್ಲಿಸಿದೆ.
ಕಿಸಾನ್ ಸೇನೆ ಜಿಲ್ಲಾಧ್ಯಕ್ಷ ಗೋವಿಂದ ಭಟ್ ಕೊಟ್ಟಂಗುಳಿ, ಮುಖ್ಯ ರಕ್ಷಾಧಿಕಾರಿ ಚಂದ್ರಶೇಖರ ರಾವ್ ಕಲ್ಲಗ, ಸಚಿನ್ ಕುಮಾರ್ ಮಾಡತ್ತಡ್ಕ, ಪುರಂದರ ರೈ ಮನವಿ ಸಲ್ಲಿಸಿದರು.




.jpg)
