ಪೆರ್ಲ: ಶೇಣಿ ಶ್ರೀ ಶಾರದಾಂಬಾ ಎ.ಯು.ಪಿ. ಶಾಲಾ ವಿದ್ಯಾರ್ಥಿನಿಯರು ಎಲ್.ಎಸ್.ಎಸ್. ಹಾಗೂ ಯು.ಎಸ್.ಎಸ್. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸ್ಕಾಲರ್ ಶೀಫ್ ಗೆ ಅರ್ಹತೆ ಪಡೆದಿದ್ದಾರೆ. ಎಲ್.ಎಸ್.ಎಸ್. ಪರೀಕ್ಷೆಯಲ್ಲಿ ಶೇಣಿ ಶಾಲಾ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾದ ಹವ್ವ ಅಮ್ನ, ಯು.ಎಸ್.ಎಸ್. ಪರೀಕ್ಷೆಯಲ್ಲಿ 7 ನೇ ತರಗತಿಯ ಅನನ್ಯ ಹಾಗೂ ಪ್ರತೀಕ್ಷಾ ತೇರ್ಗಡೆ ಹೊಂದಿದ ವಿದ್ಯಾರ್ಥಿನಿಯರು.
ಹವ್ವ ಅಮ್ನ ಉಕ್ಕಿನಡ್ಕದ ಸುಲೈಮಾನ್ ಯು-ಬುಶ್ರಾ ಪಿ.ಎಮ್ ದಂಪತಿಗಳ ಪುತ್ರಿಯಾಗಿದ್ದಾಳೆ. ಯು.ಎಸ್.ಎಸ್ ಪರೀಕ್ಷೆ ವಿಜೇತರಾದ ಅನನ್ಯ ಅವರು ಬೆದ್ರಂಪಳ್ಳ ನಿವಾಸಿಗಳಾದ ಚಂದ್ರಶೇಖರ ಮಣಿಯಾಣಿ-ತೇಜಶ್ರೀ ದಂಪತಿಯ ಪುತ್ರಿ. ಪ್ರತೀಕ್ಷಾ ಅವರು ಬಜಕೂಡ್ಲು ನಿವಾಸಿ ಪದ್ಮನಾಭ ಸುವರ್ಣ-ಚಂಪಾವತಿ ದಂಪತಿಯ ಪುತ್ರಿಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಶಾಲಾ ಪ್ರಬಂಧಕರು, ಮುಖ್ಯೋಪಾಧ್ಯಾಯರು, ಅಧ್ಯಾಪಕರು, ಪಿಟಿಎ ಸಮಿತಿ ಅಭಿನಂದಿಸಿದೆ.





