ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿನ ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಸೇನೆಯ ಮೂರು ಪಡೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದರು.
ಈ ವೇಳೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್, ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರಾದ ಅನಿಲ್ ಚೌಹಾಣ್ ಭಾಗಿಯಾಗಿದ್ದರು.
ಗಡಿ ಭಾಗದಲ್ಲಿ ಆತಂಕಕಾರಿ ಪರಿಸ್ಥಿತಿಯ ನಡುವೆಯೂ ಪಾಕಿಸ್ತಾನದಿಂದ ಹೊಸತಾಗಿ ಕದನ ವಿರಾಮ ಉಲ್ಲಂಘನೆಗಳು ನಡೆದಿಲ್ಲ. ಆದರೂ, ಈಗಿನ ಸ್ಥಿತಿಗತಿ ಕುರಿತಂತೆ ಪ್ರಧಾನಿ ಅವರು ಪರಾಮರ್ಶೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.




